×
Ad

ಮುಲ್ಕಿ : ಜೀವನದಲ್ಲಿ ಜಿಗುಪ್ಸೆ, ಮಹಿಳೆ ಆತ್ಮಹತ್ಯೆ

Update: 2016-03-17 19:49 IST

ಮುಲ್ಕಿ, ಮಾ.17: ಜೀವನದಲ್ಲಿ ಜಿಗುಪ್ಸೆ ಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪೂರ್ಣಿಮಾ 40 ಎಂದು ತಿಳಿದು ಬಂದಿದೆ. ಇವರು ಇಬ್ಬರು ಹೆಣ್ಣು ಮಕ್ಕನ್ನು ಹೊಂದಿದ್ದು ಕಳೆದ ಎರಡು ವರ್ಷಗಳ ಹಿಂದೆ ಪತಿ ಮರಣ ಹೊಂದಿದ್ದರು. ಇದೇ ಕೊರಗಿನಲ್ಲಿ ಮನೆಯ ಕೊಠಡಿಯಲ್ಲಿ  ಚೂಡಿದಾರದ ಶಾಲಿನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೊದಲು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News