ಭಟ್ಕಳ: ನಿವೃತ್ತ ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ಮನವಿ
ಭಟ್ಕಳ: ರಾಜ್ಯದ ನಿವೃತ್ತ ಸರಕಾರಿ ನೌಕರರಿಗೆಉಚಿತ ವೈದ್ಯಕೀಯ ಸೌಲಭ್ಯ ನೀಡುವುದು, ಸರಕಾರ ನೇಮಿಸಿದ ವೇತನ ಆಯೋಗಗಳು, ವೇತನ ಸಮಿತಿಗಳು, ಸಚಿವ ಸಂಪುಟ ವರದಿಗಳನ್ನು ಜ್ಯಾರಿಗೊಳಿಸಲು ವತ್ತಾಯಿಸಿ ಸಹಾಯಕಕಮಿಷನರ್ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿರಾಜ್ಯ ನಿವೃತ್ತ ನೌಕರರಿಗೆಉಚಿತ ವೈದ್ಯಕೀಯ ಸೇವೆಯನ್ನು ನೀಡಲು ಸರಕಾರಿಆದೇಶವಾಗಿದ್ದುಅದನ್ನು ಸೂಕ್ತ ರೀತಿಯಲ್ಲಿ ಪುನರ್ ಪರಿಷ್ಕರಿಸಿ ಜ್ಯಾರಿಗೊಳಿಸುವಂತೆ, ಸಂಘ ಮನವಿ ಮಾಡುತ್ತಾ ಬಂದಿದ್ದರೂಯಾವುದೇಕ್ರಮಕೈಗೊಂಡಿಲ್ಲ, ವೇತನ ಸಮಿತಿಗಳ ವರದಿಯಅನುಷ್ಟಾನದಲ್ಲಿಆಗಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಮಾಡಿಕೊಂಡ ಮನವಿಗೂ ಗಮನ ಹರಿಸಿಲ್ಲ, ಸರಕಾರಿ ನೌಕರರಿಗೆಜ್ಯಾರಿಗೆತಂದಿರುವಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ ಯೋಜನೆಗಳನ್ನು ನಿವೃತ್ತ ನೌಕರರಿಗೂ ವಿಸ್ತರಿಸಬೇಕುಎಂದೂಆಗ್ರಹಿಸಲಾಗಿದೆ. ನೌಕರರುತಮ್ಮಜಿವಿತಾವಧಿಯಅಮೂಲ್ಯ ಸಮಯ ಸರಕರಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಬರುವಅಲ್ಪ ನಿವೃತ್ತಿ ವೇತನದಲ್ಲಿಜೀವನ ಸಾಗಿಸುವಾಗ ವೈದ್ಯಕೀಯ ವೆಚ್ಚ ಭರಿಸುವುದುಕಷ್ಟಸಾಧ್ಯ.ಅನೇಕರುಆಶಕ್ತರಾದ ಸಮಯದಲ್ಲಿಆಸರೆಯಿಲ್ಲದೇತೀವ್ರ ತೊಂದರೆಗೊಳಗಾಗುತ್ತಿದ್ದಾರೆ.ವೃದ್ಧಾಪ್ಯದ ಸಂಬಂಧ ಬರುವ ಕಾಯಿಲೆಗಳ ಖರ್ಚು ನಿಭಾಯಿಸುವುದು ಕಷ್ಟ ಸಾಧ್ಯವಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಬೇರೆ ಬೇರೆ ರಾಜ್ಯಗಳು ನಿವೃತ್ತ ನೌಕರರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದುರಾಜ್ಯ ಸರಕಾರವೂಕೂಡಾತಮ್ಮ ಬೇಡಿಕೆಗಳನ್ನು ಈಡೇರಿಸಬೇಕುಎಂದು ಆಗ್ರಹಿಸಿದ್ದಾರೆ.
ಬೇಡಿಕೆಗಳಾದ ನಿವೃತ್ತ ನೌಕರರಿಗೆ ವಯೋಮಾನ ಭತ್ಯೆಯನ್ನು ಹೆಚ್ಚಿಸುವುದು, ಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ ವಿಸ್ತರಿಸುವುದು, ವೈದ್ಯಕೀಯ ಹಾಜರಾತಿ ನಿಯಮ 1969ನೇದನ್ನು ಈಗಿನ ಜೀವನ ವೆಚ್ಚ ಸೂಚ್ಯಂಕಕ್ಕೆಅನುಗುಣವಾಗಿ ಪರಿಷ್ಕರಿಸುವುದು, ನಿವೃತ್ತರ ಶವ ಸಂಸ್ಕಾರಕ್ಕಾಗಿ 20 ಸಾವಿರ ನೀಡುವುದು, ಕೇಂದ್ರ ಸರಕಾರದ 7ನೇ ವೇತನಆಯೋಗದ ಶಿಫಾರಸ್ಸಿನಂತೆ ರಾಜ್ಯದ ನಿವೃತ್ತರಿಗೆಎಲ್ಲಾ ಸೌಲಭ್ಯಗಳನ್ನು ವದಿಗಿಸುವುದು ಬೇಡಿಕೆಯಲ್ಲಿ ಸೇರಿದೆ. ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದಅಧ್ಯಕ್ಷ ವಿ. ಡಿ. ಆಚಾರಿ, ನಿವೃತ್ತ ನೌಕರರಾದ ನಾರಾಯಣ ಶೆಟ್ಟಿ, ಎಂ.ಬಿ.ನಾಯ್ಕ, ಕೃಷ್ಣ ರಾವ್, ವರ್ಣೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಹಾಯಕಕಮಿನಷರ್ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿ ಮನವಿಯನ್ನು ಸ್ವೀಕರಿಸಿದರು.