ಭಟ್ಕಳ: ರಂಜನ್ ಇಂಡೇನ್ ಎಜೇನ್ಸಿಯಿಂದ ಹೊಗೆಮುಕ್ತ ಗ್ರಾಮವಾಗಿ ಮಾರ್ಪಟ್ಟ 13 ಗ್ರಾಮಗಳು
ಭಟ್ಕಳ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯೋಜನೆಯಾದ ಹೊಗೆ ಮುಕ್ತ ಗ್ರಾಮ ನಿರ್ಮಾಣದಲ್ಲಿ ಭಟ್ಕಳದ ಮೆ. ರಂಜನ್‌ಇಂಡೇನ್‌ಎಜೆನ್ಸಿ ಮಹತ್ವದ ಸಾಧನೆ ಮಾಡಿದಎಂದುಎಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಭಟ್ಕಳ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದಅವರು ಭಟ್ಕಳ ತಾಲೂಕಿನಲ್ಲಿ ಈಗಾಗಲೇ 13 ಗ್ರಾಮಗಳನ್ನು ಹೊಗೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ತಾಲೂಕಿನಎಲ್ಲಾ ಗ್ರಾಮಗಳನ್ನೂ ಹೊಗೆ ಮುಕ್ತ ಗ್ರಾಮಗಳನ್ನಾಗಿಸುವ ಗುರಿಇದೆಎಂದಅವರು ಈಗಾಗಲೇ ಹಾಡುವಳ್ಳಿ, ಕೋಣಾರ, ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ತಿಳಿವಳಿಕೆ ನೀಡುವಕಾರ್ಯಕ್ರಮ ನಡೆಸಲಾಗಿದೆ.ಹೊಗೆ ಮುಕ್ತ ಗ್ರಾಮ ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮತಡೆಯುವುದಲ್ಲದೇ ಮನೆಯಲ್ಲಿನ ಮಹಿಳೆಯರ ಆರೋಗ್ಯದ ಮೇಲೆ ಆಗುವ ಪರಿಣಾಮಕೂಡಾ ತಪ್ಪಿಸಿದಂತಾಗುವುದು ಎನ್ನುವುದನ್ನುಚಿಕ್ಕ ಮಕ್ಕಳಿದ್ದಾಗಲೇ ಅರಿವು ಮೂಡಿಸುವಉದ್ದೇಶದಿಂದಇನ್ನಷ್ಟುಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಹೊಗೆ ಮುಕ್ತ ಗ್ರಾಮಗಳ ನಿರ್ಮಾಣದಿಂದಗ್ರಾಮೀಣ ಭಾಗದಲ್ಲಿಉರುವಲುಕಟ್ಟಿಗೆಗಾಗಿ ಮರಗಳನ್ನು ಕಡಿಯುವುದುತಪ್ಪುತ್ತದೆ. ಅಲ್ಲದೇಗ್ರಾಮೀಣಜನತೆಯಆರೋಗ್ಯವೂಕೂಡಾ ವೃದ್ಧಿಯಾಗುತ್ತದೆಎಂದು ಹೇಳಿದ ಅವರು ಈಗಾಗಲೇ ಬೆಳಕೆ ಗ್ರಾಮ ಪಂಚಾಯತಿಯಗೊರ್ಟೆ, ನೂಜ್, ಕಗ್ಗುಂಡಿ, ಹಾಡುವಳ್ಳಿ ಗ್ರಾಮ ಪಂಚಾಯತ್‌ನ ಅಗ್ಗ, ಹುಡೀಲ್, ಮುರ್ಕೋಡಿ, ಬಸ್ತಿಗಳ ಮಿಗ್ತೆ, ಓಣಿಬಾಗಿಲ್, ಕುರಂದೂರು, ದೇವಸ್ಥಾನಗಳ ಮಿಗ್ತೆ, ಕುಂಟವಾಣಿ, ಹಲ್ಯಾಣಿ ಸೇರಿದಂತೆಕೋಣಾರಗ್ರಾಮ ಪಂಚಾಯತ್‌ನಕೆರೆಹಿತ್ಲು ಗ್ರಾಮಗಳನ್ನು ಹೊಗೆ ಮುಕ್ತ ಗ್ರಾಮಗಳನ್ನಾಗಿಸಿದ್ದು ಇನ್ನೂ ಹಲವು ಗ್ರಾಮಗಳು ಇನ್ನು ಕೆಲವೇ ಸಮಯದಲ್ಲಿ ಹೊಗೆ ಮುಕ್ತ ಗ್ರಾಮಗಳಾಗಲಿವೆ ಎಂದರು. ಹೊಗೆ ಮುಕ್ತ ಗ್ರಾಮಗಳ ನಿರ್ಮಾನಕ್ಕೆಕೇಂದ್ರ ಸಚಿವಧರ್ಮೇಂದ್ರ ಪ್ರಧಾನ್‌ಆಶಯದಂತೆಇಂಡಿಯನ್‌ಆಯಿಲ್‌ಕಂಪೆನಿಯ ಅಧಿಕಾರಿಗಳು, ಶಾಸಕ ಮಂಕಾಳ ವೈದ್ಯ, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಸಮಿತಿಗಳು ಸೇರಿದಂತೆಎಲ್ಲಾ ವರ್ಗದವರೂಕೂಡಾ ಸಹಕರಿಸಿದ್ದಾರೆ ಎಂದೂ ಶಿವಾನಿ ಹೇಳಿದರು.ಈ ಸಂದರ್ಭದಲ್ಲಿ ಶಾಂತಾರಾಮ ಭಟ್ಕಳ್ ಉಪಸ್ಥಿತರಿದ್ದರು.