ಭಟ್ಕಳ: ಅಂಗನವಾಡಿ ಕೇಂದ್ರದಲ್ಲಿ ಉದಯನ್ಮೋಖ ವಿದ್ಯಾರ್ಥಿಗಳ ಪ್ರತಿಭಾ ಸಂಭ್ರಮ ಕಾರ್ಯಕ್ರಮ
ಭಟ್ಕಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಸಹಯೋಗದಲ್ಲಿ ಮುರುಡೇಶ್ವರಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ವತಿಯಿಂದಕಾಯ್ಕಿಣಿಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದ್ರಮನೆ1 , ಬಿದ್ರಮನೆ 2 ಹಾಗೂ ಬಾಕಡಕೇರಿಅಂಗನವಾಡಿ ಕೇಂದ್ರಗಳಲ್ಲಿ ಉದಯೋನ್ಮುಖ ಮಕ್ಕಳ ಪ್ರತಿಭಾ ಸಂಭ್ರಮಕಾರ್ಯಕ್ರಮಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ಮಾವಳ್ಳಿ ಜಿಲ್ಲಾ ಪಂಚಾಯತ್‌ಕ್ಷೇತ್ರದ ಸದಸ್ಯೆ ಸಿಂಧು ಭಾಸ್ಕರ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದಅವರುಇಂತಹ ಕಾರ್ಯಕ್ರಮಗಳ ಅವಶ್ಯಕತೆಗಳಿಗೆ ಒತ್ತು ನೀಡಿ, ಕಾರ್ಯಕ್ರಮವನ್ನು ಪ್ರತೀ ವರ್ಷ ನಡೆಸುತ್ತಿರುವ ಪ್ರತಿಷ್ಠಾನಕ್ಕೆ ಅಭಿನಂದನೆ ಸಲ್ಲಿಸಿ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಯ್ಕಿಣಿಗ್ರಾಮ ಪಂಚಾಯತ್‌ಉಪಾಧ್ಯಕ್ಷ ಸುಬ್ರಾಯ ನಾಯ್ಕ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ತಾ.ಪಂ. ಸದಸ್ಯಈಶ್ವರ ಬಿಳಿಯಾ ನಾಯ್ಕ, ವಾಸು ನಾಯ್ಕ, ಭಾಸ್ಕರ ನಾಯ್ಕ, ಸರಕಾರಿಹಿರಿಯ ಪ್ರಾಥಮಿಕ ಶಾಲೆ ಬಿದ್ರಮನೆಯ ಮುಖ್ಯೋಪಾಧ್ಯಾಯ ಕೆ. ಎಸ್. ನಾಯ್ಕ ಮಾತನಾಡಿದರು.
ಪ್ರಾರಂಭದಲ್ಲಿ ಸಂಸ್ಥೆಯಅಧ್ಯಕ್ಷಎಸ್. ಎಸ್. ಕಾಮತ್‌ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಿದರು.ಬಾಕಡಕೇರಿಅಂಗನವಾಡಿಕೇಂದ್ರದ ಪುಟಾಣಿಗಳು ಪ್ರಾರ್ಥನೆ ಹಾಡಿದರು.
ಬಿದ್ರಮನೆಅಂಗನವಾಡಿಕೇಂದ್ರದ ಮಕ್ಕಳು ಸ್ವಾಗತಗೀತೆ ಹಾಡಿದರು.ಬಿದ್ರಮನೆ 1 ಅಂಗನವಾಡಿಕೇಂದ್ರದಕಾರ್ಯಕರ್ತೆ ವಿಜಯಾ ಶೆಟ್ಟಿ ನಿರೂಪಿಸಿ, ವಂದಿಸಿದರು.