ಬೆಳ್ತಂಗಡಿ: ಮಾನ ನಷ್ಟ ಪ್ರಕರಣ, ರಂಜನ್ ರಾವ್ ಗೆ ಜಾಮೀನು
ಬೆಳ್ತಂಗಡಿ: ಮಾನ ನಷ್ಟ ಪ್ರಕರಣದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟಿನ ಟ್ರಸ್ಟಿ ರಂಜನ್ ರಾವ್ ಅವರ ವಿರುದ್ದ ಬೆಳ್ತಂಗಡಿ ನ್ಯಾಯಾಲಯ ಹೊರಡಿಸಿದ್ದ ಜಮೀನು ರಹಿತ ವಾರೆಂಟ್ ಹಿನ್ನಲೆಯಲ್ಲಿ ರಣಜನ್ ರಾವ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದು ಇದೀಗ ನ್ಯಾಯಾಲಯವು ಜಾಮೀನು ನೀಡಿ ಆದೇಶ ಹೊರಡಿಸಿದೆ. . ಸಮಾಜ ಮಂದಿರ ಪ್ರಕರನಕ್ಕೆ ಸಂಬಂಧಿಸಿದಂತೆ ರಂಜನ್ ರಾವ್ ಅವರು ಸಲ್ಲಿಸಿದ್ದ ದೂರಿಗೆ ಬೆಳ್ತಂಗಡಿ ಪೋಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದ ಹಿನ್ನಲೆಯಲ್ಲಿ ರಂಜನ್ ರಾವ್ ಅವರ ವಿರುದ್ದ ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ರತ್ನವರ್ಮ ಬುಣ್ಣು ಸಲ್ಲಿಸಿದ್ದ ಮಾನ ನಷ್ಟ ಮೂಕದಮೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ರಂಜನ್ ರಾವ್ ಅವರ ವಿರುದ್ದ ಬೆಳ್ತಂಗಡಿ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು ರಂಜನ್ ರಾವ್ ಅವರು ಮಾ.14 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದಲ್ಲಿ ಕಾನೂನು ಬದ್ದವಾಗಿ ಹೋರಾಟ ಮುಂದುವರಿಸುವುದಾಗಿ ರಂಜನ್ ರಾವ್ ತಿಳಿಸಿದ್ದಾರೆ.