×
Ad

ಮಂಜೇಶ್ವರ : ಚಲಿಸುತ್ತಿದ್ದ ಟೆಂಪೋಗೆ ಬೆಂಕಿ : ಚಾಲಕ ಕ್ಲೀನರ್ ಪಾರು

Update: 2016-03-17 20:03 IST

ಮಂಜೇಶ್ವರ : ಪತ್ತೋಡಿ ಬಳಿ ಚಲಿಸುತ್ತಿದ್ದ ಟೆಂಪೋವೊಂದು ಬೆಂಕಗಾಹುತಿಯಾದ ಘಟನೆ ವರದಿಯಾಗಿದೆ. ಟೆಂಪೋ ಸಂಪೂರ್ಣ ಉರಿದು ನಾಶವಾಗಿದೆ. ಮಂಜನಾಡಿಯಿಂದ ಕಾಸರಗೋಡಿಗೆ ಹತ್ತಿ ತುಂಬಿಕೊಂಡು ಬರುತ್ತಿದ್ದ ಕೆ.ಎಲ್ 14 ಎನ್ 8166 ನಂಬ್ರದ ಟೆಂಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭ ಟೆಂಪೋದಲ್ಲಿದ್ದ ಚಾಲಕ ನಾಗರಾಜ್ , ಆತನ ಮಿತ್ರ ಅಹ್ಮದ್ ಪಾರಾಗಿದ್ದಾರೆ. ಟೆಂಪೋ ಸಂಪೂರ್ಣ ಉರಿದು ನಾಶವಾಗಿದ್ದು ಟೆಂಪೋದ ಡೇಶ್ ಬೋರ್ಡಿನಲ್ಲಿದ್ದ 20 ಸಾವಿರ ರೂ ಕೂಡಾ ಉರಿದು ನಾಶವಾಗಿದೆ. ಉಪ್ಪಳದಿಂದ ತಲುಪಿದ 2 ತಂಡ ಅಗ್ನಿಶಾಮಕ ಧಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News