×
Ad

ಮೂಡುಬಿದಿರೆ: ವಿಜ್ಞಾನ ಅಕಾಡಮಿಯ ಉಪನ್ಯಾಸ ಕಾರ್ಯಗಾರ: ನ್ಯಾನೋ ಸಯನ್ಸ್ ಮತ್ತು ನ್ಯಾನೋ ತಂತ್ರಜ್ಞಾನ

Update: 2016-03-17 20:19 IST

ಮೂಡುಬಿದಿರೆ: ನ್ಯಾನೋ ಸಯನ್ಸ್ ಮತ್ತು ನ್ಯಾನೋ ತಂತ್ರಜ್ಞಾನ  ಕುರಿತು ಎರಡು ದಿನಗಳ ವಿಜ್ಞಾನ ಅಕಾಡಮಿಯ ಉಪನ್ಯಾಸ ಕಾರ್ಯಗಾರವು ವಿಜ್ಞಾನ ಅಕಾಡಮಿಗಳು, ಸೆಂಟರ್ ಾರ್ ನ್ಯಾನೋ ಅಂಡ್ ಸಾ್‌ಟ ಮ್ಯಾಟರ್ ಸಯನ್ಸ್, ಬೆಂಗಳೂರು ಇವರ ಸಹಯೋಗ ಹಾಗೂ ಪ್ರಾಯೋಜಕತ್ವದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭೌತಶಾಸ್ತ್ರ ವಿಭಾಗದ ವತಯಿಂದ ನಡೆಯಿತು. ಕಾರ್ಯಗಾರದ ಸಂಚಾಲಕ, ಬೆಂಗಳೂರಿನ ನ್ಯಾನೋ ಅಂಡ್ ಸಾ್‌ಟ ಮ್ಯಾಟರ್ ನಿರ್ದೇಶಕ ಪ್ರೊ. ಜಿ. ಯು. ಕುಲಕರ್ಣಿ ಉದ್ಘಾಟಿಸಿದರು. ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ನ್ಯಾನೋ ಸಯನ್ಸ್ ಮತ್ತು ನ್ಯಾನೋ ತಂತ್ರಜ್ಞಾನದ ಉಪಯೋಗ ಹೊಂದಲು ಜ್ಞಾನದ ಹಂಚುವಿಕೆಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದ ಉಪಯೋಗಗಳನ್ನು ಅವರು ವಿವರಿಸಿದರು. ಮುಖ್ಯ ಅತಿಥಿ ಅಮೆರಿಕಾ ುರುಡ್ಯು ವಿಶ್ವವಿದ್ಯಾಲಯದ ಪ್ರೊ. ತಿಮೋತಿ ಫಿಶರ್ ಕಾರ್ಯಕ್ರಮಕ್ಕೆ ಶುಭಹಾರೈಸಿ, ನ್ಯಾನೋ ವಿಜ್ಞಾನ ಕಲಿಕೆಯಲ್ಲಿ ಮೂಲವಿಜ್ಞಾನದ ಮಹತ್ವವನ್ನು ವಿವರಿಸಿದರು.
 ಆಳ್ವಾಸ್ ಶಿಕ್ಷಣ ಸಂಸ್ಥಾನದ ಟ್ರಸ್ಟಿ ವಿವೇಕ್ ಆಳ್ವ ಅದ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಪೀಟರ್ ೆರ್ನಾಡಿಸ್ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಸಂತೋಷ ಆಚಾರ್ಯ ಸ್ವಾಗತಿಸಿದರು. ಕಾರ್ಯಗಾರದ ಸಂಯೋಜಕ ಭೌತಶಾಸ್ತ್ರ ವಿಭಾಗದ ಸಹ ಪಾಧ್ಯಾಪಕ ಡಾ ರಾಮಪ್ರಸಾದ್ ಎ.ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ರಾಜೇಶ್ ಕುಮಾರ್ ವಂದಿಸಿದರು. ಶ್ರೀಮತಿ ಅಮೃತ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿಷಯ ತಜ್ಞರಿಂದ ಉಪನ್ಯಾಸ ಕಾಂರ್ಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News