ವಾರ್ತಾಭಾರತಿ ವರದಿ ಫಲಶ್ರುತಿ:ಗ್ರಾ.ಪಂಗಳಿಗೆ ತೆರಿಗೆ ರಶೀದಿ ಪುಸ್ತಕ ಪೂರೈಕೆಗೆ ಸಿಇಒ ಸೂಚನೆ
Update: 2016-03-17 20:54 IST
ಮೂಡುಬಿದಿರೆ, ಮಾ.17: ದ.ಕ. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಕೊರತೆಯಿದ್ದ ತೆರಿಗೆ ರಶೀದಿ ಪುಸ್ತಕಗಳ ಪೂರೈಕೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಿದ್ಯಾ ಗುರುವಾರ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ತೆರಿಗೆ ರಶೀದಿ ಪುಸ್ತಕಗಳ ಕೊರತೆ ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಉಂಟಾಗಿತ್ತು. ಇದರಿಂದ ಪಂಚಾಯತ್‌ಗಳ ಸಂಪನ್ಮೂಲ ಕ್ರೋಡೀ
ಕರಣ ಕುಂಠಿತಗೊಳ್ಳುತ್ತಿರುವ ಬಗ್ಗೆ ಗುರುವಾರದ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೆರಿಗೆ ರಶೀದಿ ಪುಸ್ತಕಗಳನ್ನು ಜಿಲ್ಲಾ ಪಂಚಾಯತ್‌ನಿಂದ ಕೂಡಲೇ ತೆಗೆದುಕೊಳ್ಳುವಂತೆ ಎಲ್ಲ ಗ್ರಾ.ಪಂಚಾಯತ್‌ಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.