ಲೋಕಾಯುಕ್ತ ಮುಚ್ಚುವ ಹುನ್ನಾರ: ಡಿ.ವಿ ಸದಾನಂದಗೌಡ
ಮಂಗಳೂರು,ಮಾ.17: ಕಳೆದ ಎರಡು ಮೂರು ತಿಂಗಳ ವಿದ್ಯಮಾನ ಗಮನಿಸಿದರೆ ರಾಜ್ಯ ಸರಕಾರವು ಲೋಕಾಯುಕ್ತವನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲು ಸುಪ್ರಿಂ ಕೋರ್ಟ್ ಸೂಚಿಸಿದ್ದು ಹೌದು. ಆದರೆ ರಾಜ್ಯ ಸರಕಾರ ಲೋಕಾಯುಕ್ತ ಮುಚ್ಚಲು ಹುನ್ನಾರ ನಡೆಸುತ್ತಿದ್ದು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಯತ್ನ, ಲೋಕಾಯುಕ್ತಕ್ಕೆ ತಮಗೆ ಬೇಕಾದವರನ್ನು ನೇಮಕಕ್ಕೆ ಯತ್ನ ಮತ್ತು ಕಚೇರಿಯನ್ನು ಖಾಲಿ ಮಾಡಲು ಪ್ರಯತ್ನಿಸಿದೆ ಎಂದು ಹೇಳಿದರು.
ರಾಷ್ಟ್ರದ್ರೋಹ ಕ್ಕೆ ಸಂಬಂಧಪಟ್ಟ ವ್ಯಾಖ್ಯಾನವನ್ನು ಪುನರ್‌ಪರಿಶೀಲಿಸುವ ಚಿಂತನೆಯಿದ್ದು ಇದಕ್ಕಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಂಡು ಹೊಸದಾಗಿ ವ್ಯಾಖ್ಯಾನಿಸಲಾಗುತ್ತದೆ. ಇದು ಸರಕಾರದ ಅಭಿಪ್ರಾಯವಲ್ಲ. ಇತ್ತೀಚಿನ ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬಂದ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.