ಉಳ್ಳಾಲ: ನಿರ್ಮಾಣ ಹಂತದ ಫ್ಲೈಓವರ್ ಕಮರಿಗೆ ಬಿದ್ದ ಗೂಡ್ಸ್ ಲಾರಿ, ಗಾಯಗೊಂಡ ಲಾರಿ ಮಾಲಕ
Update: 2016-03-17 22:35 IST
ಉಳ್ಳಾಲ: ದೇರಳಕಟ್ಟೆಯಿಂದ ಹುಬ್ಬಳ್ಳಿಗೆ ಫ್ಲೈವುಡ್ ಸಾಗಿಸುತ್ತಿದ್ದ ಗೂಡ್ಸ್ ಲಾರಿ ತೊಕ್ಕೊಟ್ಟಿನ ನಿರ್ಮಾಣ ಹಂತದ ಫ್ಲೈಓವರ್ ಕಮರಿಗೆ ಬಿದ್ದು ಲಾರಿ ಮಾಲಕ ಗಾಯಗೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮೊಯಿದಿನ್ ಕುಂಞಿ ಗಾಯಗೊಂಡ ಲಾರಿ ಮಾಲಕ. ತೊಕ್ಕೊಟ್ಟಿನಲ್ಲಿ ಫ್ಲೈಓವರ್ ಕೆಲಸ ಪ್ರಗತಿಯಲ್ಲಿದ್ದು, ಫ್ಲೈವುಡ್ ಸಾಗಿಸುತ್ತಿದ್ದ ಲಾರಿ ಚಾಲಕ ಪಿಂಟೋ ಅತಿವೇಗವಾಗಿ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಫ್ಲೈಓವರ್ ಕಾಮಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೆ ಲಾರಿ ಉರುಳಿಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯವಿಲ್ಲದೆ ಪಾರಾಗಿದ್ದು, ಗಾಯಾಳು ಲಾರಿ ಮಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.