×
Ad

ಮಂಜೇಶ್ವರ : ಚೆಕ್‌ಪೋಸ್ಟ್ ಆಕ್ರಮಣ, ನಾಲ್ಕು ಪ್ರಕರಣಗಳಲ್ಲಾಗಿ 200 ಮಂದಿ ವಿರುದ್ದ ಕೇಸು

Update: 2016-03-17 22:39 IST

ಮಂಜೇಶ್ವರ : ಹೊಸಂಗಡಿ ವಾಮಂಜೂರು ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್ ನಲ್ಲಿ ಕಳೆದ ರಾತ್ರಿ ಮೀನು ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಹಿನ್ನಲೆಯಲ್ಲಿ ಉಂಟಾದ ಆಕ್ರಮಣ ಘಟನೆಯಲ್ಲಿ ಮಂಜೇಶ್ವರ ಪೋಲೀಸರು ನಾಲ್ಕು ಕೇಸು ದಾಖಲಿಸಿದ್ದಾರೆ. ನಾಲ್ಕು ಪ್ರಕರಣಗಳಲ್ಲಾಗಿ 200 ಮಂದಿ ವಿರುದ್ದ ಕೇಸು ದಾಖಲಿಸಲಾಗಿದೆ. ಸಂಘರ್ಷ ಹಿನ್ನಲೆಯಲ್ಲಿ ಸ್ಥಳಕ್ಕೆ ತಲುಪಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಶ್ರೀನಿವಾಸನ್ ರ ಸರಕಾರಿ ವಾಹಣಕ್ಕೆ ಕಲ್ಲೆಸೆದ ಪ್ರಕರಣ, ಅಬಕಾರಿ ಇಲಾಖೆಯ ಕಛೇರಿ ಹಾಗೂ ವಾಹಣ ಪುಡಿಗೈದ ಪ್ರರಕರಣ, ಹಾಗೂ ವಾಣಿಜ್ಯ ಇಲಾಖೆ ಕಚೇರಿ ಹಾಗೂ ವಾಹಣಕ್ಕೆ ಹಾನಿಗೈದ ಪ್ರಕರಣ ಮತ್ತು ಹೆದ್ದಾರಿ ತಡೆ ವೇಳೆ ವಾಹಣಗಳ ಮಧ್ಯೆ ಬಾಕಿಯಾದ 5 ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಹಾನಿಗೈದ ಪ್ರಕರಣ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಾಗಿ 200 ಮಂದಿ ವಿರುದ್ದ ಕೇಸು ದಾಖಲಿಸಲಾಗಿದೆ. ಖಾಸಗಿ ಸೊತ್ತಿಗೆ ಹಾನಿ , ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ , ಅನ್ಯಾಯವಾಗಿ ಗುಂಪು ಸೇರಿದ್ದು ಎಂಬೀ ಜಾಮೀನು ರಹಿತ ಖಾಯ್ದೆಯಡಿ ಕೇಸು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News