×
Ad

ಸೈಬರ್ ಕ್ರೈಮ್ ಸೆಲ್‌ಗೆ ಮತ್ತೆ ದೂರು ಸಲ್ಲಿಸಲಿರುವ ಹೃತಿಕ್

Update: 2016-03-17 23:11 IST

ಮುಂಬೈ,ಮಾ.17: ತನ್ನ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ತನ್ನ ಹೆಸರಿನಲ್ಲಿ ನಟಿ ಕಂಗನಾ ರಣಾವತ್ ಜೊತೆ ಮಾತನಾಡುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಮುಂಬೈ ಪೊಲೀಸ್‌ನ ಸೈಬರ್ ಅಪರಾಧ ಘಟಕಕ್ಕೆ ಇನ್ನೊಂದು ದೂರನ್ನು ಸಲ್ಲಿಸಲು ನಿರ್ಧರಿಸಿರುವುದಾಗಿ ನಟ ಹೃತಿಕ್ ರೋಷನ್ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಪರಿಚಿತ ವ್ಯಕ್ತಿಯೋರ್ವ ತನ್ನ ಇ-ಮೇಲ್ ಐಡಿಯನ್ನು ಬಳಸಿಕೊಂಡು ತನ್ನ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದಾನೆ ಎಂದು ಹೃತಿಕ್ 2014,ಡಿ.12ರಂದು ಮೊದಲ ಬಾರಿಗೆ ದೂರು ಸಲ್ಲಿಸಿದ್ದರು.

  

ಕಂಗನಾಗೆ ಮೊದಲು ಕಾನೂನು ನೋಟಿಸನ್ನು ಕಳುಹಿಸಿದ್ದ ಹೃತಿಕ್ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಯಾಚಿಸುವಂತೆ ಮತ್ತು ತಮ್ಮಿಬ್ಬರ ಸಂಬಂಧದ ಬಗ್ಗೆ ಹಬ್ಬಿರುವ ಗುಲ್ಲನ್ನು ನಿವಾರಿಸುವಂತೆ ಸೂಚಿಸಿದ್ದರು. ಕಂಗನಾ ಜೊತೆ ತನ್ನ ಸಂಬಂಧವನ್ನು ಅವರು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಆದರೆ ತಾನು ಬುದ್ಧಿ ಬೆಳೆಯದ ಬಾಲಕಿಯಲ್ಲ ಎಂದು ಹೇಳಿದ್ದ ಕಂಗನಾ ಕ್ಷಮೆಯಾಚನೆಗೆ ನಿರಾಕರಿಸಿದ್ದಲ್ಲದೆ,ತನ್ನ ನೋಟಿಸನ್ನು ಹಿಂದೆಗೆದುಕೊಳ್ಳುವಂತೆ ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುವಂತೆ ಎಚ್ಚರಿಕೆಯೊಂದಿಗೆ ಹೃತಿಕ್‌ಗೆ ಪ್ರತಿನೋಟಿಸ್ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News