×
Ad

ಬಹರೈನ್: ಸೋಶಿಯಲ್ ಫೋರಂ ಘಟಕ ಉದ್ಘಾಟನೆ

Update: 2016-03-17 23:45 IST

ಬಹರೈನ್, ಮಾ.17: ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಘಟಕವನ್ನು ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎ. ಸಯೀದ್ ಉದ್ಘಾಟಿಸಿದರು.ಮುಖ್ಯ ಭಾಷಣ ಮಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಬುಡಕಟ್ಟು ಜನರು,ದಲಿತರು ಮತ್ತು ಮುಸ್ಲಿಮರು ತಾರತಮ್ಯ ನೀತಿ ಎದುರಿಸುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಭಾರತವನ್ನು ಆಳಿದ ಬಹುತೇಕ ಎಲ್ಲ ಪಕ್ಷಗಳು ಒಂದೇ ನೀತಿಯನ್ನು ಅನು ಸರಿಸುತ್ತಾ ಬಂದಿದೆ. ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗಿ ಹಾಗೂ ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಹೇಳಿದರು.

ಎಸ್‌ಡಿಪಿಐ ತಮಿಳುನಾಡು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ರಾಮ್ನಾಡ್, ಹಂಝ ಪಟ್ಟಾಂಬಿ, ಜಾವೇದ್ ಪಾಶ ಬೆಂಗ ಳೂರು, ಬಹರೈನ್ ಇಂಡಿಯಾ ಫ್ರಟೆ ರ್ನಿಟಿ ಫೋರಂ ಅಧ್ಯಕ್ಷ ಶಾನವಾಝ್ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಅಹ್ಮದ್ ಇಬ್ರಾಹೀಂ ಚೆನ್ನೈ ಸ್ವಾಗತಿಸಿದರು. ಯೂಸುಫ್ ಪಿ.ವಿ. ವಂದಿಸಿದರು. ಮುಹಮ್ಮದ್ ಇಬ್ರಾ ಹೀಂ ಆಂಧ್ರಪ್ರದೇಶ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News