×
Ad

ತುಳು ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರ

Update: 2016-03-17 23:46 IST

ಕೊಣಾಜೆ, ಮಾ.17: ನಾನಾ ಕಾರಣಗಳಿಂದ ತುಳುನಾಡಿನ ಯುವ ಜನರು ತುಳು ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಶ್ರೀಮಂತಿಕೆಯಿಂದ ಕೂಡಿರುವ ತುಳುಭಾಷೆ, ಸಂಸ್ಕೃತಿ, ಕಲೆ, ಜನಪದ ಮತ್ತು ಸಾಹಿತ್ಯ ಮತ್ತು ಪರಂಪರೆಯ ಬಗ್ಗೆ ಅಭಿಮಾನವಿರಲಿ ಎಂದು ಪ್ರಾಧ್ಯಾಪಕ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ರಘು ಇಡ್ಕಿದು ಹೇಳಿದರು. ತುಳು ಸಾಹಿತ್ಯ ಅಕಾಡಮಿಯ ಸಹ ಯೋಗದಲ್ಲಿ ಮುಡಿಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ತುಳು ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯ’ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತ ನಾಡಿದರು. ಕಾಲೇಜಿನ ಪ್ರಾಂಶು ಪಾಲ ಡಾ. ಗಿರಿಧರ್ ರಾವ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದ್ಧರು. ವಿವಿಧ ಗೋಷ್ಠಿಗ ಳಲ್ಲಿ ಪ್ರಾಧ್ಯಾಪಕರಾದ ಡಾ.ಶ್ರೀಶ ಕುಮಾರ್, ಡಾ. ಧನಂಜಯಕುಂಬ್ಳೆ ಮತ್ತು ಕಿರುತೆರೆ ನಿರ್ದೇಶಕ ಕೊರಗಪ್ಪಶಿಂಗಾರಕೋಡಿ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿದ್ದರು. ಜನಪದ ಕಲಾವಿದೆ ಗಂಗು ಮಿತ್ತೂರು ಮತ್ತು ಮೋಹನ ವಿವಿಧ ತುಳು ಪಾಡ್ದನ ಮತ್ತು ಸಂಧಿಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು. ಡಾ. ಶ್ರೀಧರ ಮಣಿಯಾಣಿ ಸ್ವಾಗತಿ ಸಿದರು. ಪ್ರಾಧ್ಯಾಪಕ ನಂದಕಿಶೋರ್ ಮತ್ತು ಶುಭಾ ಕೆ.ಎಚ್. ವಂದಿಸಿದರು. ಗೌತಮಿ ಮತ್ತು ಕಾವ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News