ಬುರೂಜ್ ಶಾಲೆಗೆ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್
Update: 2016-03-17 23:49 IST
ಪೂಂಜಾಲಕಟ್ಟೆ, ಮಾ.17: ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದ ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಯೆನೆಪೊಯ ಫೆಡರೇಶನ್ ನೀಡುವ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿದೆ. ಸತತ 3 ಬಾರಿ ಈ ಪ್ರಶಸ್ತಿಯನ್ನು ಬುರೂಜ್ ಶಾಲೆ ಪಡೆದಿದೆ. ಪ್ರಶಸ್ತಿ ಪತ್ರದೊಂದಿಗೆ 7,000 ರೂ. ನಗದು ಬಹುಮಾನವನ್ನೂ ಗಳಿಸಿದೆ.