ತಾಪಂ,ಜಿಪಂ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ
ಉಡುಪಿ, ಮಾ.17: ರಾಜ್ಯ ಸರಕಾರ ಈಗಾಗಲೇ ಉತ್ತಮ ಆಡಳಿತ ನಿರ್ವಹಣೆಗೆ ಪಿಎಸಿ ಸೂಚ್ಯಂಕದಲ್ಲಿ 3ನೆ ಸ್ಥಾನ ಪಡೆದಿದ್ದು, ಇನ್ನುಳಿದ 2 ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ ಗುಣಮಟ್ಟಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಿ ಪ್ರಥಮ ಸ್ಥಾನ ಗಳಿಸುವತ್ತ ಯೋಜನೆಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಅಭಿನಂ ದನಾ ಸಮಾರಂಭದಲ್ಲಿ ಅವರು ಮಾತ ನಾಡುತ್ತಿದ್ದರು. ಇತ್ತೀಚೆಗೆ ನಡೆದ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಪಕ್ಷವು ಉಡುಪಿ ಜಿಲ್ಲೆಯಲ್ಲಿ ಬೇರೆ ಬೇರೆ ಕಾರಣದಿಂದ ಹೆಚ್ಚಿನ ಸ್ಥಾನಗಳಿಸಲು ವಿಫಲವಾಗಿರ ಬಹುದು. ಆದರೆ ಮತಗಳಿಕೆಯಲ್ಲಿ ಬಿಜೆಪಿಗಿಂತ ಮುಂದಿ ರುವುದು ಫಲಿತಾಂಶದ ಅಂಕಿಅಂಶಗಳಿಂದ ಕಂಡುಬರುತ್ತದೆ. ಈ ಹಿನ್ನ್ನೆಲೆಯಲ್ಲಿ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸು ವಲ್ಲಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ಈ ಸಂದರ್ಭ ಕಲ್ಯಾಣಪುರ ಜಿಪಂ ಸದಸ್ಯ ಜನಾದರ್ನ ತೋನ್ಸೆ ಹಾಗೂ ತಾಪಂ ಸದಸ್ಯ ಧನಂಜಯರನ್ನು ಸನ್ಮಾನಿಸಲಾಯಿತು. ಅವಧಿ ಪೂರೈಸಿದ ಉಡುಪಿ ನಗರಸಭಾ ಅಧ್ಯಕ್ಷ ಯುವರಾಜ್ ಹಾಗೂ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿಯವರನ್ನು ಅಭಿನಂದಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕರೆ, ಮುಖಂಡರಾದ ಬಿ.ನರಸಿಂಹಮೂರ್ತಿ, ಮೀನಾಕ್ಷಿ ಮಾಧವ ಬನ್ನಂಜೆ, ಕೇಶವ ಕೋಟ್ಯಾನ್, ಮನೋಜ್ ಕರ್ಕೇರ, ಪ್ರಶಾಂತ ಪೂಜಾರಿ, ಸುಜಯ್ ಪೂಜಾರಿ, ಅಮೃತ್ ಶೆಣೈ, ಗೋಪಾಲ, ಕುಶಲ ಶೆಟ್ಟಿ, ಸುರೇಶ ಶೆಟ್ಟಿ ಬನ್ನಂಜೆ, ಪ್ರಖ್ಯಾತ ಶೆಟ್ಟಿ, ಗಣೇಶ್ ರಾಜ್ ಸರಳಬೆಟ್ಟು, ಅಣ್ಣಯ್ಯ ಸೇರಿಗಾರ್, ಯತೀಶ್ ಕರ್ಕೇರ, ಶಶಿರಾಜ್ ಕುಂದರ್, ರಮೇಶ್ ಕಾಂಚನ್, ಸುಕೇಶ್ ಕುಂದರ್, ಹಸನ್, ವಿಜಯ ಪೂಜಾರಿ, ಆರ್.ಕೆ. ರಮೇಶ್, ಗೀತಾ ಶೆಟ್, ಹೇಮಲತಾ ಜತ್ತನ್ನ, ಜಾನಕಿ ಶೆಟ್ಟಿಗಾರ್, ಶೋಭಾ ಪೂಜಾರಿ, ಸೆಲಿನ್ ಕಾರ್ಕಡ, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ಜನಾರ್ದನ ಭಂಡಾ ರ್‌ಕಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.