ಫೋಟೊಗ್ರಫಿ ಕಾರ್ಯಾಗಾರ
Update: 2016-03-17 23:56 IST
ಪುತ್ತೂರು, ಮಾ.17: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದ.ಕ ಮತ್ತು ಉಡುಪಿ ಇದರ ವತಿಯಿಂದ ಛಾಯಾಗ್ರಾಹಕರಿಗೆ ಫೋಟೊಗ್ರಾಫಿ ಕಾರ್ಯಾಗಾರ ಪುತ್ತೂರು ಪುರಭವನದಲ್ಲಿ ನಡೆಯಿತು. ಸೌತ್ ಕೆನರಾ ಪೋಟೊಗ್ರಾಫರ್ಸ್ ಎಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಶೆಟ್ಟಿ ಉದ್ಘಾಟಿಸಿದರು. ಛಾಯಾಗ್ರಾಹಕ ಗುರುದತ್ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಪುತ್ತೂರು ವಲಯದ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಿತ್ತೂರು, ಮಧು ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.