ಉಳ್ಳಾಲ : ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ಫಿಟ್ಟರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ
ಉಳ್ಳಾಲ : ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ಫಿಟ್ಟರ್‌ಗೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲ ಬೈಲ್ ಎಂಬಲ್ಲಿ ಗುರುವಾರತಡರಾತ್ರಿ ನಡೆದಿದ್ದು, ಈ ಬಗ್ಗೆ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದವರನ್ನು ತೊಕ್ಕೊಟ್ಟು ಭಟ್ನಗರ ನಿವಾಸಿ ಸುನಿಲ್ ಎಂದು ಹೆಸರಿಸಲಾಗಿದೆ.ಘಟನೆಯ ವಿವರ: ಸುನಿಲ್ ಎಂಬವರು ಮಾಸ್ತಿಕಟ್ಟೆ ಸಮೀಪವಿರುವಗ್ಯಾರೇಜ್‌ವೊಂದರಲ್ಲಿ ಬೈಕ್ ದುರಸ್ತಿ ಮಾಡಿಕೊಡುವ ಕೆಲಸ ಮಾಡುತ್ತಿದ್ದರುಎನ್ನಲಾಗಿದೆ. ನಿನ್ನೆರಾತ್ರಿ ವೇಳೆ ವ್ಯಕ್ತಿಯೊಬ್ಬರಕರೆ ಸುನಿಲ್‌ಗೆ ಬಂದಿದೆ.ಕರೆ ಮಾಡಿದವರು ನನ್ನ ಬೈಕ್ ದುರಸ್ತಿ ಯಾಗಿದೆಯೇಎಂದು ಕೇಳಿದ್ದರು. ಈ ಸಂದರ್ಭ ಸುನಿಲ್ ಅವರು ನಿಮ್ಮ ಬೈಕ್ ಗೇರೇಜ್‌ನಲ್ಲಿ ಇಲ್ಲ. ಬೈಕ್ ನಂಬರ್ ತಿಳಿಸಿ ಎಂದಿದ್ದರು.ಇದರಿಂದ ಆಕ್ರೋಶಗೊಂಡ ಕರೆ ಮಾಡಿದ ವ್ಯಕ್ತಿ ಸುನಿಲ್‌ಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುನಿಲ್‌ರವರು ತನ್ನ ಬೈಕ್‌ನಲ್ಲಿ ದೂರು ಕೊಡಲೆಂದು ಉಳ್ಳಾಲ ಠಾಣೆಗೆ ತೆರಳುತ್ತಿದ್ದ ಸಂದರ್ಭ ಎದುರುಗಡೆಯಿಂದ ಬೈಕ್‌ನಲ್ಲಿ ಬಂದ ವ್ಯಕ್ತಿ ಇವರನ್ನುಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಕರೆ ಮಾಡಿದ ವ್ಯಕ್ತಿಯ ಮೊಬೈಲ್‌ನ ಆಧಾರದಲ್ಲಿ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.