×
Ad

ಮಂಗಳೂರು: ಅಕ್ರಮ ಮರ ಸಾಗಾಟ ಪತ್ತೆ

Update: 2016-03-18 17:41 IST

ಮಂಗಳೂರು,ಮಾರ್ಚ್18 : ಮಾ. 18 ರಂದು ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ಮರ ಸಾಗಾಟ ಮಾಡುತ್ತಿರದ್ದ ಲಾರಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

      ಕಿರಾಲ್ ಬೋಗಿ ಜಾತಿಯ ಮರದ 31 ದಿಮ್ಮಿ ಮತ್ತು 17 ಕಂಬಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ವಶಪಡಿಸಿ, ಲಾರಿ ಚಾಲಕ ಸಿದ್ದೀಕ್  ಎಂಬವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ. ಸದ್ರಿ ವಾಹನವು ಬೆಳ್ತಂಗಡಿ ಪಡಂಗಡಿಯ ಬಾಲಾಕೃಷ್ಣ ಶೆಟ್ಟಿಯವರ ಮಾಲಿಕತ್ವದಲ್ಲಿರುವುದಾಗಿದೆ.

       ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ಮತ್ತು ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿ ಬಿ. ಜಗರಾಜ್, ರವಿ ಕುಮಾರ್ ಅರಣ್ಯ ರಕ್ಷಕರಾದ ಜಿತೇಶ್ ಪಿ. ಸುಕುಮಾರ್, ಅರಣ್ಯ ವೀಕ್ಷಕರಾದ  ದೇವದಾಸ್ ಇವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News