ಜನರ ಚಿಂತನೆಗಳನ್ನು ಬದಲಿಸಿದ ತಫ್ಹೀಮುಲ್‌ಕುರ್‌ಆನ್ : ಮೌಲಾನಸಲ್ಮಾನ್ ನದ್ವಿ
ಭಟ್ಕಳ:ಇಸ್ಲಾಮಿ ಜಗತ್ತಿನ ಖ್ಯಾತ ವಿದ್ವಾಂಸ ಮೌಲಾನ ಸೈಯ್ಯದ್ ಅಬುಲ್ ಆಲಾ ಮೌದೂದಿಯವರ ತಫ್ಹೀಮುಲ್ ಕುರ್‌ಆನ್ ಗ್ರಂಥವು ಜನರ ಚಿಂತನೆಗಳಿಗೆ ಹೊಸ ತಿರುವು ನೀಡಿದ್ದುಸಾಮಾಜಿಕವಾಗಿ ಚಿಂತಿಸಿಸುವಂತೆ ಮಾಡಿದೆಎಂದುಅಂತರಾಷ್ಟ್ರೀಯಖ್ಯಾತಿಯ ವಿದ್ವಾಂಸ ಮೌಲಾನ ಸೈಯ್ಯದ್ ಸಲ್ಮಾನ್ ನದ್ವಿ ಹೇಳಿದರು.
ಅವರು ಶುಕ್ರವಾರರಾತ್ರಿಜಾಮಿಯಾಬಾದ್ ನ ನ್ಯೂ ಶಮ್ಸ್ ಸ್ಕೂಲ್‌ಆವರಣದಲ್ಲಿತರಬಿಯತ್‌ಎಜ್ಯುಕೇಶನ್ ಸೂಸೈಟಿ ಆಯೋಜಿಸಿದ್ದ ಕುರ್‌ಆನ್ ವ್ಯಾಖ್ಯಾನಗಳ ಸಂಗ್ರಹಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಈ ವರೆಗೆ ಹಲವು ವಿದ್ವಾಂಸರುಕುರ್‌ಆನ್‌ಗ್ರಂಥದ ವ್ಯಾಖ್ಯಾಯನವನ್ನು ವಿವಿಧರೀತಿಯಲ್ಲಿ ಮಾಡಿದ್ದಾರೆ.
ಇನ್ನೂ ಹಲವರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.ನಾನು ವಿಶಿಷ್ಟ ರೀತಿಯಲ್ಲಿಖ್ಯಾತ ನಾಮ ವಿದ್ವಾಂಸರುಗಳಾದ ಮೌಲಾನ ಸೈಯ್ಯದ್‌ಅಬುಲ್ ಆಲಾ ಮೌದೂದಿಯವರತಫ್ಹೀಮುಲ್‌ಕುರ್‌ಆನ್, ಮೌಲಾನಅಬ್ದುಲ್ ಮಾಜೀದ್‌ದರಿಯಬಾದಿಯವರತಫ್ಸೀರೆಮಾಜೀದಿ,ಮೌಲಾನಅಮಿನ್‌ಅಹಸನ್‌ಇಸ್ಲಾಹಿಯವರತದಬ್ಬರುಲ್‌ಕುರ್‌ಆನ್ ಹಾಗೂ ಮೌಲಾನಮುಫ್ತಿ ಶಫಿಉಸ್ಮಾನಿಯವರ ಮಾಅರಿಫ್-ಉಲ್‌ಕುರ್‌ಆನ್
ವ್ಯಾಖ್ಯಾಯನಗಳನ್ನುಗಳನ್ನು ಕ್ರೂಢೀಕರಿಸಿ ಸರಳ ಅನುವಾದದೊಂದಿಗೆಇಂತೆಖಾಬೆ ಎಂಬ ಹೆಸರಿನಿಂದ ಪ್ರಕಟಿಸಿದ್ದು ಇದರಿಂದಾಗಿಒಬ್ಬ ಮದರಸಾದಲ್ಲಿಕಲಿಯುತ್ತಿರುವ ವಿದ್ಯಾರ್ಥಿಯಿಂದ ಹಿಡಿದುಉನ್ನತ ಶಿಕ್ಷಣ ನಿರತ ವಿದ್ಯಾರ್ಥಿಗಳಿಗೂಇದುಸೂಕ್ತವ್ಯಾಖ್ಯಾಯನಗ್ರಂಥವಾಗಲಿದೆ.ಮೇಲಿನನಾಲ್ಕು ಜಗದ್ವಿಖ್ಯಾತರಚಿಂತನೆ,ವಿಚಾರಗಳನ್ನುಒಂದೇಕಡೆಸೇರಿಸಿದ್ದುಇದುಅದ್ಯಾಯನಶೀಲರಿಗೂ,ಸಾಮಾನ್ಯನಿಗೂಉತ್ತಮ ಮಾಗದರ್ಶಿ ಗ್ರಂಥವಾಗಲಿದೆಎಂದರು.
ಇಸ್ಲಾಮಿಚಿಂತಕ ಮೌಲಾನ ಮೌದೂದಿಯವರುತಫ್ಹೀಮುಲ್‌ಕುರ್‌ಆನ್ ವ್ಯಾಖ್ಯಾಯನಗ್ರಂಥದ ಮೂಲಕ ಸಮಾಜದಎಲ್ಲ ವರ್ಗದಜನರುಕುರ್‌ಆನ್ ಸುಲಭದಲ್ಲಿ ಅರಿತುಕೊಳ್ಳುವಂತೆ ಮಾಡಿದ್ದಾರೆ ಈ ನಿಟ್ಟಿನಲ್ಲಿ ಮೌಲಾನಕೊಡುಗೆಅಪಾರವಾಗಿದೆಎಂದಅವರುಇಂದು ಮುಸ್ಲಿಂ ಸಮುದಾಯದಲ್ಲಿತಮ್ಮತಮ್ಮ ನಾಯಕರ ಚಿಂತನೆಗಳನ್ನು ಮುಂದಿಟ್ಟುಕೊಂಡು ವರ್ಗಸಂರ್ಘಷ ನಡೆಯುತ್ತಿರುವುದುಖೇದಕರವಾಗಿದೆ. ಇಸ್ಲಾಮಿದೃಷ್ಟಿಕೋನದಲ್ಲಿಇದು ಸರಿಯಲ್ಲ. ಇಡೀ ಲೋಕಕ್ಕೆ ಮಾದರಿಯಾಗಿ ಬಂದಇಸ್ಲಾಮ್‌ಧರ್ಮ ಸೀಮಿತ ಉದ್ದೇಶಗಳನ್ನು ಹೊಂದಿಲ್ಲ. ಸಮುದಾಯದ ವಿವಿಧ ಸಂಘಟನೆಗಳು ತಮ್ಮತಮ್ಮ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಸಮುದಾಯದಲ್ಲಿಒಡುಕನ್ನುಂಟು ಮಾಡುತ್ತಿರುವುದು ಸರಿಯಲ್ಲ. ಜಾಗತಿಕವಾಗಿ ಮುಸ್ಲಿಮರು ಒಂದೇ ವೇದಿಕೆಗೆ ತರುವುದು ಇಂದಿನ ಕಾಲದ ಬೇಡಿಕೆಯಾಗಿದ್ದುತಬ್ಲಿಗಿ, ಸಲಫಿ, ಸುನ್ನಿ, ಜಮಾಅತೆಇಸ್ಲಾಮಿ ಹೀಗೆ ನಾವು ಪರಸ್ಪರು ನಮ್ಮ ನಮ್ಮ ವಿಚಾರಗಳನ್ನು ಬದಿಗಿಟ್ಟು ಸಮುದಾಯದ ಒಳಿತಿಗಾಗಿ ಇಸ್ಲಾಮ್‌ಧರ್ಮದ ವಿಶಾಲ ದೃಷ್ಟಿಕೋನದಲ್ಲಿ ಒಂದಾಗಬೇಕಾಗಿದೆ ಎಂದು ಹೇಳಿದರು.
ತರಬಿಯತ್‌ಎಜ್ಯುಕೇಶನ್ ಸೂಸೈಟಿಯಅಧ್ಯಕ್ಷ ಹಾಗೂ ಭಟ್ಕಳ ಮುಸ್ಲಿಮ್ ಜಮಾಅತ್‌ದುಬೈಇದರ ಮಾಜಿಅಧ್ಯಕ್ಷಅಬ್ದುಲ್‌ಕಾದಿರ್ ಬಾಷಾ ರುಕ್ನುದ್ದೀನ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮರ್ಕಝಿಖಲೀಫಾಜಮಾಅತ್ ಮುಖ್ಯಖಾಝಿ ಮೌಲಾನಕ್ವಾಜಾ ಮುಹಿದ್ದೀನ್‌ಅಕ್ರಮಿ ನದ್ವಿ, ಜಮಆತುಲ್ ಮುಸ್ಲಿಮೀನ್ ಖಾಝಿ ಮೌಲಾನಅಬ್ದುಲ್‌ಅಲೀಮ್‌ಕಾಝೀಯಾ, ಕಂಡ್ಲೂರುಝೀಯಾವುಲ್‌ಉಲೂಮ್ ಶಿಕ್ಷಣ ಸಂಸ್ಥೆಯ ಮೌಲಾನಉಬೈದುಲ್ಲಾ ನದ್ವಿ, ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಸಂಸ್ಥೆಯ ಮೌಲಾನ ಸೈಯ್ಯದ್‌ಝುಬೈರ್‌ಎಸ್.ಎಂ.ಪ್ರಸ್ತಾವಿಕವಾಗಿ ಮಾತನಾಡಿತರಬಿಯತ್‌ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯನ್ನು ಪರಿಚಯಿಸಿದರು.
ಆಹ್ಮದ್ ಸಯೀದ್‌ಜಾಮಿಯಾ ಮಸೀದಿಯ ಇಮಾಮ್ ಹಗೂ ಖತೀಬ್ ಮೌಲಾನ ಮುಹಮ್ಮದ್‌ಜಾಫರ್ ಫಕ್ಕಿಭಾವ್‌ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.