ಕೇರಳ ಯೂತ್ ಕಾಂಗ್ರೆಸ್ ಕಾರ್ಯಕರ್ತ ಹತ್ಯೆ ಪ್ರಕರಣದಲ್ಲಿ ಸಿಪಿಐಎಂ ಕಾರ್ಯಕರ್ತರ ಬಂಧನ
Update: 2016-03-18 19:09 IST
ಅಲಪ್ಪುಝ, ಮಾರ್ಚ್.18: ಅಲಪ್ಪುಝ ಯೂತ್ ಕಾಂಗ್ರೆಸ್ ಕಾರ್ಯಕರ್ತ ಏವೂರ್ ಸುನೀಲ್ ಭವನದ ಸುನೀಲ್ ಕುಮಾರ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಸಿಪಿಎಂ ಬ್ರಾಂಚ್ ಕಾರ್ಯದರ್ಶಿಗಳನ್ನು ಬಂಧಿಸಲಾಗಿದೆ. ಮಾಜಿ ಪಂಚಾಯತ್ ಸದಸ್ಯ ಪ್ರಕಾಶನ್, ಸಿಪಿಎಂ ಬ್ರಾಂಚ್ ಕಾರ್ಯದರ್ಶಿಗಳಾದ ಅನೀಶ್, ಶರತ್, ಡಿವೈಎಫ್‌ಐ ಕಾರ್ಯಕರ್ತ ಸುನೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಬಂಧನಗಳು ಈ ಪ್ರಕರಣದಲ್ಲಿ ನಡೆಯಲಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಾಕಾಸ್ತ್ರಗಳೊಂದಿಗೆ ಬಂದಿದ್ದ ತಂಡ ತಾಯಿ,ಪತ್ನಿಯ ಮುಂದೆಯೇ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಇರಿದು ಕೊಲೆಗೈದಿತು.