ಭಾರತ್ ಮಾತಾಕಿ ಜೈ ಎನ್ನದವರ ಪೌರತ್ವ ಮರಳಿ ಪಡೆದು ಮತದಾನದ ಹಕ್ಕು ನಿಷೇಧಿಸಬೇಕು: ಶಿವಸೇನೆ

Update: 2016-03-18 13:44 GMT

ಮುಂಬೈ,ಮಾರ್ಚ್.18: ಭಾರತ್ ಮಾತಾಕಿ ಜೈ ಘೋಷಣೆಯನ್ನು ಕೂಗಲು ಹಿಂಜರಿಯುವ ದೇಶದ್ರೋಹಿಗಳಿಗೆ ಮತದಾನಹಕ್ಕು ನಿಷೇಧಿಸಬೇಕು ಮತ್ತು ಪೌರವತ್ವವನ್ನು ಹಿಂದಕ್ಕೆ ಪಡೆಯಬೇಕೆಂದು ಶಿವಸೇನೆ ಗುಡುಗಿದೆ. ಶಿವಸೇನೆಯಮುಖ ಪತ್ರಿಕೆ ಸಾಮ್ನಾದ ಸಂಪಾದಕೀಯದಲ್ಲಿ ಈ ಎಚ್ಚರಿಕೆಯನ್ನು ಅದು ನೀಡಿದೆ. ಭಾರತ್ ಮಾತಾಕಿಜೈ ಎಂಬ ಘೋಷಣೆ ಕೂಗಲು ಹಿಂಜರಿದ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಮತ್ತು ಅವರಪಕ್ಷದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾಮ್ನಾ ಆಗ್ರಹಿಸಿದೆ.

 ಕೊರಳಿಗೆ ಕತ್ತಿಯಿಟ್ಟರೂ ತಾನು ಭಾರತ್‌ಮಾತಾಕಿ ಜೈ ಎನ್ನಲಾರೆ ಹಾಗೆ ಹೇಳಬೇಕೆಂದು ಸಂವಿಧಾನದಲ್ಲಿಲ್ಲ ಎಂದು ಉವೈಸಿ ಹೇಳಿದ್ದರು. ತದನಂತರ ಉವೈಸಿಯ ನಿಕಟ ಅನುಯಾಯಿ ಮತ್ತು ಮಹಾರಾಷ್ಟ್ರ ಎಂಎಲ್‌ಎ ವಾರಿಸ್ ಪಠಾನ್ ಈ ಘೋಷಣೆ ಕೂಗಲು ನಿರಾಕರಿಸಿದ್ದರು. ಉವೈಸಿ ಭಾರತ ಮಾತೆಯ ಹಿಂದಿನಿಂದ ತಿವಿದಿದ್ದಾರೆ. ಈತ ಸ್ವಯಂ ತಾನು ಭಾರತದ ಪ್ರಜೆ ಎಂದು ವಾದಿಸುತ್ತಿದ್ದಾರೆಂದೂ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

 ತನ್ನ ಮಾತೃರಾಷ್ಟ್ರ ಪ್ರೇಮವನ್ನು ಭಾರತ್ ಮಾತಾಕಿ ಜೈ ಎಂಬ ಘೋಷಣೆ ಮೂಲಕ ಯಾರಾದರೂ ಉತ್ತೇಜಿಸುವ ಕೆಲಸವನ್ನು ಮಾಡುತ್ತಾರೆ. ಈ ಘೋಷಣೆ ಜಾತಿಮತ ಗಡಿಗಳನ್ನು ಮೀರಿದ್ದೆಂದು ಶಿವಸೇನೆ ಹೇಳಿದೆ. ಮಾತೃದೇಶದಲ್ಲಿ ವಿಶ್ವಾಶವಿಲ್ಲದ ಉವೈಸಿ ವಂದೇ ಮಾತರಂ ಹೇಳುವುದಿಲ್ಲವೆಂದೂ ಇಸ್ಲಾಮಿನ ಆತ್ಮ ಇರುವುದರಿಂದ ದೇಶದ ಸಿವಿಲ್ ಕೋಡ್‌ನಲ್ಲಿ ಅವರಿಗೆ ವಿಶ್ವಾಸವಿಲ್ಲವೆಂದೂ ಸಾಮ್ನಾ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News