×
Ad

ಸಾಮಾಜಿಕ ಮಾಧ್ಯಮಕ್ಕೆ ಭಾಗವತ್ರ ತಿರುಚಿದ ಚಿತ್ರ: ಇಬ್ಬರು ಯುವಕರ ಬಂಧನ

Update: 2016-03-18 23:28 IST

ಖರ್ಗೋನ್, ಮಾ.18: ಸಾಮಾಜಿಕ ಮಾಧ್ಯಮದಲ್ಲಿ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್‌ರ ಆಕ್ಷೇಪಕಾರಿ ಹಾಗೂ ತಿರುಚಿದ ಭಾವಚಿತ್ರವನ್ನು ಹಾಕಿರುವ ಆರೋಪದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆಯೆಂದು ಮಧ್ಯಪ್ರದೇಶದ ಪೊಲೀಸರು ಇಂದು ತಿಳಿಸಿದ್ದಾರೆ.
ಶಾಕಿರ್(22) ಹಾಗೂ ವಸೀಂ(20) ಎಂದು ಗುರುತಿಸಲಾಗಿರುವ ಈ ಯುವಕರನ್ನು ಭಿಕನ್‌ಗಾಂವ್ ಪಟ್ಟಣದ ಸ್ಥಳೀಯ ಸಾಮಾಜಿಕ ಜಾಲದ ಗುಂಪೊಂದರಲ್ಲಿ ಭಾಗವತ್‌ರ ತಿರುಚಿದ ಭಾವಚಿತ್ರವನ್ನು ಅಪ್‌ಲೋಡ್ ಮಾಡಿದುದಕ್ಕಾಗಿ ಮಾ.16ರಂದು ಬಂಧಿಸಲಾಗಿದೆಯೆಂದು ಎಎಸ್ಪಿ ಅಂತರ್ ಸಿಂಗ್ ಕಾನೇಶ್ ಹೇಳಿದ್ದಾರೆ.
ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದೊಡನೆಯೇ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಈ ವಿಷಯದಲ್ಲಿ ಪ್ರಬಲ ಪ್ರತಿಭಟನೆ ದಾಖಲಿಸಿದ್ದರು. ಆ ಬಳಿಕ ಆರೋಪಿಗಳಿಬ್ಬರ ವಿರುದ್ಧ ಐಟಿ ಕಾಯ್ದೆಯ ಸೆ.67 ಹಾಗೂ ಐಪಿಸಿಯ ಸೆ.505(2) ರನ್ವಯ ಭಿಕನ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಲಾಯಿತೆಂದು ಅವರು ತಿಳಿಸಿದ್ದಾರೆ.
ತಮಗೆ ಈ ಭಾವಚಿತ್ರ ಇನ್ನೊಂದು ಯಾವುದೋ ಗುಂಪಿನಿಂದ ಬಂದಿತ್ತು. ತಾವದನ್ನು ಕೇವಲ ಫಾರ್ವರ್ಡ್ ಮಾಡಿದ್ದೇವಷ್ಟೇ ಎಂದು ಆರೋಪಿಗಳು ಪ್ರತಿಪಾದಿಸಿದ್ದಾರೆಂದು ಕಾನೇಶ್ ಹೇಳಿದ್ದಾರೆ.
ಶಾಕಿರ್ ಹಾಗೂ ವಸೀಂ ಇಬ್ಬರನ್ನೂ ಬಂಧಿಸಲಾಗಿದ್ದು, ಪ್ರಥಮ ದರ್ಜೆಯ ನ್ಯಾಯಾಂಗ ದಂಡಾಧಿಕಾರಿ ಸದಾಶಿವ ದಗೋಡೆ, ಅವರನ್ನು ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಅವರಿಗೆ ಮಾ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News