×
Ad

ಎಬಿವಿಪಿ ನೇತೃತ್ವದ ಹಿಂಸಾಚಾರಕ್ಕೆ ಮನನೊಂದು ಲಕ್ನೋ ವಿಶ್ವವಿದ್ಯಾನಿಲಯದ ಶಿಕ್ಷಕರಿಂದ ರಾಜೀನಾಮೆ ಸಲ್ಲಿಕೆ

Update: 2016-03-18 23:38 IST

ಲಕ್ನೋ, ಮಾ.18 : ವಿದ್ಯಾರ್ಥಿಯನ್ನು ಅಮಾನತುಗೊಂಡಿರುವ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯೂ ಪ್ರಸಕ್ತ ಸನ್ನಿವೇಶದಲ್ಲಿ ಕೆಲಸ ಮಾಡಲು ಕಷ್ಟಕರವಾಗುತ್ತಿದೆ ಎಂದು ಆರೋಪಿಸಿ ಸುಮಾರು 95 ಲಕ್ನೋ ವಿಶ್ವವಿದ್ಯಾನಿಲಯದ ಶಿಕ್ಷಕರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಆವರಣದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಶಿಕ್ಷಕರ ಜೊತೆ ನಡೆಸಿದ ಪ್ರತಿಭಟನೆಕಾರರ ನಡವಳಿಕೆಗೆ ಬೇಸತ್ತು ಸುಮಾರು 95 ಶಿಕ್ಷಕರು ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎಂದು ಲಕ್ನೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೇಲ್ವಿಚಾರಕ ನಿಶಿ ಪಾಂಡೆ ತಿಳಿಸಿದ್ದಾರೆ.ಆದಾಗ್ಯೂ ವಿಶ್ವವಿದ್ಯಾನಿಲಯದ ಉಪಕುಲಪತಿ ಎಸ್.ಬಿ. ನಿಮ್ಸೆಯವರು ವಿವಾದ ಬಗೆಹರಿದಿದೆ ಎಂದು ಹೇಳಿಕೊಂಡಿದ್ದಾರೆ.

  ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕದ ಪ್ರಕಾರ ವಿದಾರ್ಥಿನಿಯರ ಮೇಲೆ ದೂರು ದಾಖಲಿಸಿರುವ ವಾರ್ಡನ್ ವಿರುದ್ಧ ಪ್ರತಿಭಟನೆಯನ್ನು ಕೆಲ ವಿದ್ಯಾರ್ಥಿಗಳು ಸಮಾಜವಾದಿ ಯುವ್‌ಜಬ್ ಚತ್ರ ಸಭಾ ಎಂದು ಹೇಳಿ, ವಿದ್ಯಾರ್ಥಿ ನಿಲಯದ ಮುಖ್ಯಸ್ಥೆಯ ಮಗ ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಡ್ಯಾನ್ಸ್ ಮಾಡುವ ವೀಡಿಯೋ ದೃಶ್ಯದ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ತೋರಿಸಲಾಗುತ್ತಿದೆ ಎಂದು ಹೇಳಲಾಗಿದೆ.

   ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಮಿಶ್ರರವರನ್ನು ಅಮಾನತುಗೊಳಿಸಲಾಗಿದೆ ,ಆದರೆ ಇತರ ವಿದಾರ್ಥಿಗಳು ಅವರ ಬೆಂಬಲವಾಗಿ ನಿಂತುಕೊಂಡಿದ್ದಾರೆ ಇದರಲ್ಲಿ ಎಬಿವಿಪಿ ಸದಸ್ಯರು ಕೂಡ ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

  ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಪೊಲೀಸರನ್ನು ಕರೆಯಲಾಗಿತ್ತು.ಆದರೂ ವಿದ್ಯಾರ್ಥಿಗಳು ಕೆರಳಿ ಒಡಾಡಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿ,ಅವರ ವಾಹನಗಳಿಗೆ ಹಾನಿ ಮಾಡಿ ,ಮನೆಗಳ ಮೇಲೆ ಬೆಂಕಿಯನ್ನು ಹಚ್ಚಿದ್ದಾರೆ .ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

     ಹಿಂಸಾಚಾರ ಬುಧವಾರ ಸಂಜೆಯವರೆಗೂ ನಿರಂತರವಾಗಿ ನಡೆದಿತ್ತು.118 ಜನರ ಮೇಲೆ ಹಸನ್‌ಗಂಜ್ ಪೊಲೀಸ್ ಠಾಣೆ ಯಲ್ಲಿ ಎಪ್‌ಐಆರ್ ದಾಖಲಿಸಲಾಗಿದೆ ಅದರಲ್ಲಿ 18 ಜನರನ್ನು ಹೆಸರನ್ನು ಗುರುತಿಸಲಾಗಿದೆ ಹಿಂಸಾಚಾರದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.ಈ ನಡುವೇ ವಾರ್ಡನ್ ಕ್ಯಾಂಪಸ್ ಬಿಡಲು ನಿರಾಕರಸಿ,ಅವರ ಮಗನ ವೀಡಿಯೋ ಎರಡು ವರ್ಷ ಹಿಂದಿನದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.ಎಪ್‌ಐಆರ್ ದಾಖಲಿಸಿದರಲ್ಲಿ ವಾರ್ಡನ್‌ನ ಮಗ ಹಾಗೂ ತಂದೆ ಪ್ರಭತ್ ಮತ್ತು ಎಬಿವಿಪಿ ನಾಯಕ ಅನುರಾಗ್ ತಿವಾರಿಯ ಹೆಸರಿದೆ.ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹಲ್ಲೆ ನಡೆಸಿಲ್ಲ ಆಸ್ತಿಯನ್ನು ಹಾನಿಗೊಳಿಸಿಲ್ಲ ಎಂದು ಎಬಿವಿಪಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News