×
Ad

ನಾಳೆ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮ

Update: 2016-03-18 23:56 IST

 ಉಡುಪಿ, ಮಾ.18: ಜಿಲ್ಲಾ ಕೃಷಿಕ ಸಂಘ ಹಾಗೂ ಮಂಗಳೂರಿನ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಆಯೋಜನೆಯಲ್ಲಿ ಮಾ.20ರ ಸಂಜೆ 4ಕ್ಕೆ ನಗರದ ಉಡುಪಿ ರೆಸಿಡೆನ್ಸಿ ಹೊಟೇಲ್ ರೂಪ್‌ಟಾಪ್ ಸಭಾಂಗಣದಲ್ಲಿ ಕೃಷಿ ಉತ್ಪನ್ನಗಳ ವೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸಾವಯವ ಸಂತೆಯ ಯಶಸ್ವಿ ರೂವಾರಿ ಅಡ್ಡೂರು ಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News