ಭಟ್ಕಳ: ಅಂಜುಮನ್ ಇಂಜಿನೀಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಕೌಶಲ್ಯ ಕಾರ್ಯಗಾರ
ಭಟ್ಕಳ: ಇಲ್ಲಿನ ಅಂಜುಮಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮೆನೇಜ್‌ಮೆಂಟ್ ಕಾಲೇಜಿನಲ್ಲಿ ಎರಡು ದಿನಗಳ ಪ್ರೊಗ್ರಾಮಿಂಗ್ ಸ್ಕಿಲ್ಸ್ ಕಾರ್ಯಾಗಾರವನ್ನು ಹೈದರಾಬಾದಿನ ಟಕ್ನಾಲಜಿ ಕನ್ಸ್‌ಲ್‌ಟೆಂಟ್ ಜಿ. ಶ್ರೀನಿವಾಸ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಇದರ ಪ್ರಧಾನ ಕಾರ್ಯದರ್ಶಿ ಕಾಶಿಮಜಿ ಮೊಹಮ್ಮದ್ ಅನ್ಸಾರ್ ವಹಿಸಿದ್ದರು. ನಂತರ ಮಾತನಾಡಿದ ಅವರು ಇಂತಹ ಕಾರ್ಯಾಗಾರಗಳು ಇಂಡಸ್ಟ್ರಿ ಮತ್ತು ಅಕಾಡೆಮಿಕ್ ಕೋರ್ಸುಗಳನ್ನು ಬೆಸೆಯಲು ಅತ್ಯಂತ ಸಹಕಾರಿಯಾಗುವುದು. ಅಂಜುಮಾನ್ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ರೂಪಿಸುವತ್ತ ಸಹಕರಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಟೆಕ್ನೋವೇಟ್-ಇ-ನ್ಯೂಸ್‌ಲೆಟರ್ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎ.ಐ.ಟಿ.ಎಂ. ಪ್ರಾಂಶುಪಾಲ ಡಾ. ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ, ಎ.ಐ.ಟಿ.ಎಂ. ನಿರ್ದೇಶಕ ಡಾ. ಉದಯ ಪ್ರಸನ್ನ, ಉಪ ಪ್ರಾಂಶುಪಾಲ ಪ್ರೊ. ಎಚ್.ಎಂ. ಫಾಲಚಂದ್ರ ಉಪಸ್ಥಿತರಿದ್ದರು. ಪ್ರೊ. ಸರ್ಫರಾಜ್ ಮುರ್ಜಾನಾಯಿಕ್, ಪ್ರೊ. ಕಿರಣ್ ವಿ. ಶ್ಯಾನುಭಾಗ್, ಪ್ರೊ. ಶ್ರೀಶೈಲ ಭಟ್ಟ, ಪ್ರೊ. ಸುಬ್ರಹ್ಮಣ್ಯ ಭಾಗವತ್ ಮುಂತಾದವರು ಸಹಕರಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ್ದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಮುಖ್ಯಸ್ಥ ಪ್ರೊ. ಟಿ.ಎಂ.ಪಿ. ರಾಜಕುಮಾರ್ ಸ್ವಾಗತಿಸಿದರು. ಪ್ರೊ. ಶರೀಫ್ ಬೆಂಗಾಲತ್ ಪರಿಚಯಿಸಿದರು. ಸೈಫ್ ಮತ್ತು ದಾನಿಷ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪ್ರತೀಕ್ಷಾ ನಾಯ್ಕ ವಂದಿಸಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.