ಕಾರ್ಕಳ: ಬೈಲೂರು ಬ್ರಾಹ್ಮಣ ಸಂಘದ ವಾರ್ಷಿಕೋತ್ಸವ
ಕಾರ್ಕಳ: ಬೈಲೂರು ವಲಯ ಬ್ರಾಹ್ಮಣ ಸಂಘದ 9ನೇ ವಾರ್ಷಿಕೋತ್ಸವವು ನಿಂಜೂರು ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೌಡೂರು ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಸಂಚಾಲಕ ಕೆ.ರಾಘವೇಂದ್ರ ಆಚಾರ್, ಅಧ್ಯಕ್ಷ ವೈ.ಸುಧಾಕರ ಭಟ್, ಉಪಾಧ್ಯಕ್ಷ ಹೆಬ್ರಿ ಭಾಸ್ಕರ ಜೋಯಿಸ್, ಸಂಘದ ಗೌರವಾಧ್ಯಕ್ಷ ಬೈಕಾಡಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಮಂಗಳೂರು ವಿ.ವಿ.ಯ ಬಿ.ಎಸ್ಸಿಯಲ್ಲಿ 8ನೇ ರ್ಯಾಂಕ್ ಗಳಿಸಿದ ಅನುಷಾ, ಪಾಕಶಾಸ್ತ್ರ ಪ್ರವೀಣ ಕಂಪನ್ ರಘುರಾಮ ಭಟ್ ಅವರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು. ನಿಂಜೂರು ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಎನ್.ಅಶೋಕ್ ಸಾಮಗ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಅನಂತಪಟ್ಟಾಭಿರಾವ್ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಅನಂತತೀರ್ಥ ಭಟ್ ವಂದಿಸಿದರು.