×
Ad

ಕಾರ್ಕಳ: ಇರ್ವತ್ತೂರು, ರುದ್ರಭೂಮಿ ನಿರ್ಮಾಣಕ್ಕೆ ಮನವಿ

Update: 2016-03-19 17:54 IST

ಕಾರ್ಕಳ: ಇರ್ವತ್ತೂರು ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿಗೆ ಸರಕಾರಿ ಜಾಗವಿದ್ದರೂ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದರಿಂದ ಸಾರ್ವಜನಿಕರಿಗೆ ಶವ ದಹನ ಕಾರ್ಯಕ್ಕೆ ತೊಂದರೆಯಾಗುತ್ತಿದ್ದು, ಸುಸಜ್ಜಿತ ಸ್ಮಶಾನ ನಿರ್ಮಾಣಕ್ಕಾಗಿ ಇರ್ವತ್ತೂರು ಗ್ರಾಮಸ್ಥರ ಪರವಾಗಿ ಸ್ಥಳೀಯ ಯುವಕ ಮಂಡಲದಿಂದ ಶಾಸಕ, ವಿಪಕ್ಷ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ನೀಡಲಾಯಿತು. ಮನವಿಗೆ ಶೀಘ್ರ ಸ್ಪಂದಿಸಿದ ಶಾಸಕರು ಮುಂದಿನ ಅನುದಾನದಲ್ಲಿ ಸ್ಮಶಾನ ನಿರ್ಮಾಣಕ್ಕೆ 2 ಲಕ್ಷ ರೂ. ಮೀಸಲಿಡುವ ಬಗ್ಗೆ ಭರವಸೆ ನೀಡಿದರು.

ಜಿ.ಪಂ. ಸದಸ್ಯ ಉದಯ ಎಸ್ ಕೋಟ್ಯಾನ್, ಎಪಿಎಂಸಿ ಸದಸ್ಯ ರಘುಚಂದ್ರ ಜೈನ್, ಪಂಚಾಯತ್ ಸದಸ್ಯ ಶೇಖರ್ ಅಂಚನ್, ಯುವಕ ಮಂಡಲದ ಅಧ್ಯಕ್ಷ ಭರತ್ ಕುಮಾರ್ ಜೈನ್, ಕಾರ್ಯದರ್ಶಿ ಜಯಕರ ಎಂ.ಕೋಟ್ಯಾನ್, ಕೋಶಾಧಿಕಾರಿ ಸುರೇಶ್ ಕುಲಾಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News