ಕಾರ್ಕಳ: ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿ ವತಿಯಿಂದ ಶಿಲ್ಪಕಲಾ ಸಂಭ್ರಮ-20
Update: 2016-03-19 17:56 IST
ಕಾರ್ಕಳ: ಶಿಲ್ಪಕಲಾ ಅಕಾಡೆಮಿ ರಚನೆಯಾಗಿ 20 ವರ್ಷಗಳು ಕಳೆದಿರುವ ಪ್ರಯುಕ್ತ ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿ ವತಿಯಿಂದ ಶಿಲ್ಪಕಲಾ ಸಂಭ್ರಮ-20 ಎಂಬ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು. ಶಿಲ್ಪಕಲೆಯ ಬಗ್ಗೆ ವಿಚಾರಗೋಷ್ಟಿ, ಶಿಲ್ಪ ಪ್ರಾತ್ಯಕ್ಷಿಕೆ, ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲ್ಲಾ ಜಿಲ್ಲೆಗಳಿಂದ ಆಯ್ಕೆಯಾದ 30 ಮಂದಿ ಶಿಲ್ಪಿಗಳನ್ನು ಅಭಿನಂದಿಸಲಾಗಿದ್ದು, ಉಡುಪಿ ಜಿಲ್ಲಾ ವತಿಯಿಂದ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಶಾಮರಾಯ ಆಚಾರ್ಯರ ಪುತ್ರ ಕಾರ್ಕಳದ ವಿಜಯಶಿಲ್ಪ ಶಾಲಾ ಶಿಲ್ಪಗ್ರಾಮದ ಕೆ. ಸತೀಶ್ ಆಚಾರ್ಯರನ್ನು ಅಭಿನಂದಿನಿ ಸನ್ಮಾನಿಸಲಾಯಿತು.