ಕಾರ್ಕಳ: ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ
ಕಾರ್ಕಳ: ಹಿರ್ಗಾನ ಚಿಕ್ಕಲ್ ಬೆಟ್ಟು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಭಾನುವಾರ ಕಣ್ಣಿನ ಪೊರೆ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು. ನೀರೆಬೈಲೂರು ಲಯನ್ಸ್ ಕ್ಲಬ್, ಯಶಸ್ವಿ ನಾಗರಿಕ ಸೇವಾ ಸಂಘ, ವಾಸುದೇವ ನಗರ ಹಿರ್ಗಾನ ಮತ್ತು ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಈ ಶಿಬಿರ ನಡೆಯಿತು. ಸುಮಾರು 102 ಮಂದಿ ಫಲಾನುಭವಿಗಳು ಭಾಗವಹಿಸಿದ್ದು 14 ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು 37 ಮಂದಿಗೆ ಉಚಿತ ಕನ್ನಡಕ ನೀಡಲಾಯಿತು. ಲಯನ್ಸ್ ಅಧ್ಯಕ್ಷ ಉದಯಕುಮಾರ್ ಹೆಗ್ಡೆ, ಯಶಸ್ವಿ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಚೇತನ ಶೆಟ್ಟಿ, ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಶೆಟ್ಟಿ, ಸದಸ್ಯರಾದ ತಾರನಾಥ್ ಶೆಟ್ಟಿ, ಮುರಳಿಧರ ಭಟ್ ಹಿರ್ಗಾನ, ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷರು, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿಗಳು ಮತ್ತು ತಂಡ ಹಾಗೂ ಪಂಚಾಯತ್ ಸದಸ್ಯರು, ಹಾಗೂ ಲಯನ್ಸ್ ಲಯನೆಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.