ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ, ಹಿಂದುತ್ವವನ್ನು ವಿರೋಧಿಸುತ್ತೇನೆ: ಉವೈಸಿ
ಹೊಸದಿಲ್ಲಿ, ಮಾರ್ಚ್, 19: ಭಾರತ್ ಮಾತಾಕಿ ಜೈ ಹೇಳಲು ನಿರಾಕರಿಸಿ ವಿವಾದದ ಕಿಡಿ ಹೊತ್ತಿಸಿದ ಎಐಎಂಐಎಂ ಪ್ರಮುಖ ಅಸಾದುದ್ದೀನ್ ಉವೈಸಿ ಆರೆಸ್ಸೆಸ್ ವಿರುದ್ಧ ಮತ್ತೆ ಕಿಡಿ ಕಾರಿದ್ದು ಆರೆಸ್ಸೆಸ್ ಘರ್‌ವಾಪಸಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಭಾರತ್ ಮಾತಾಕಿ ಜೈ ಘೋಷಣೆಯ ವಿಷಯವನ್ನೆತ್ತಿದೆ ಎಂದು ಹೇಳಿದ್ದಾರೆ.
ಉವೈಸಿ ಮಾತಾಡುತ್ತಾ ತಾನೆಂದೂ ಹಿಂದೂ ಧರ್ಮದ ವಿರೋಧಿಯಲ್ಲ ಬದಲಾಗಿ ಹಿಂದುತ್ವವನ್ನು ವಿರೋಧಿಸುತ್ತೇನೆ ಸಾವರ್‌ಕರ್ ತನ್ನ ಪುಸ್ತಕದಲ್ಲಿ ಬರೆದಿರುವುದನ್ನು ಜಾರಿಗೊಳಿಸುವುದು ಆರೆಸ್ಸೆಸ್ ಯೋಜನೆಯಾಗಿದೆ" ಎಂದು ಹೇಳಿದ್ದಾರೆ.
ತಾನು ಹಿಂದುತ್ವವನ್ನು ವಿರೋಧಿಸುವೆನೇ ವಿನಾ ಹಿಂದೂ ಧರ್ಮವನ್ನಲ್ಲ ಎಂದು ಸ್ಪಷ್ಟ ಪಡಿಸಿದ ಅವರು "ನಾನು ಭಾರತದ ಪ್ರಾಮಾಣಿಕ ನಾಗರಿಕನಾಗಿರುವೆ. ನಾನು ಸೌದಿಯನ್ನೂ ಕೂಡ ಆರಾಧಿಸುವುದಿಲ್ಲ. ಅಲ್ಲಿ ಮುಸ್ಲಿಮರಿಗೆ ಎರಡು ಅತ್ಯಂತ ಪವಿತ್ರ ಸ್ಥಳಗಳಿವೆ. ನಾನು ಅಲ್ಲಾಹನನ್ನು ಆರಾಧಿಸುವವನುಮತ್ತು ಈ ದೇಶದ ಒಬ್ಬ ಪ್ರಾಮಾಣಿಕ ನಾಗರಿಕ" ಎಂದು ಹೇಳಿದ್ದಾರೆ.