×
Ad

ಪಿ.ಎ.ಕಾಲೇಜಿನಲ್ಲಿ ರಕ್ತದಾನ ಶಿಬಿರವು ಶುಕ್ರವಾರ ನಡೆಯಿತು. ಪಿ.ಎ.ಕಾಲೇಜಿನಲ್ಲಿ ರಕ್ತದಾನ ಶಿಬಿರ

Update: 2016-03-19 19:24 IST

ಕೊಣಾಜೆ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಪಿ.ಎ. ಕಾಲೇಜಿನ ಆವರಣದಲ್ಲಿ ರಕ್ತದಾನಶಿಬಿರ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ವೆನ್ ಲಾಕ್ ಆಸ್ಪತ್ರೆಯ ವೈ ದ್ಯಾಧಿಕಾರಿ ಡಾ ಶರತ್ ಕುಮಾರ್, ಎಡ್ವರ್ಡ್‌ವಾಜ್ ಹಾಗೂ 13 ವೈದ್ಯವಿದ್ಯಾರ್ಥಿಗಳು ವಿದ್ಯಾರ್ಥಿಗಳಜೊತೆಗೂಡಿ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ 119 ರಕ್ತ ಘಟಕಗಳನ್ನು ಸಂಗ್ರಹಿಸಲಾಯಿತು. ಕಾಲೇಜಿನ ಅನೇಕ ಸ್ವಯಂ ಸೇವಕರು ಹಾಗೂ ಶಿಕ್ಷಕ ಸಿಬ್ಬಂದಿ ಶಿಬಿರವನ್ನು ಯಶಸ್ವಿಯಾಗಿ ಅಯೋಜಿಸಲು ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ಶರೀಫ್ ಅವರು ಮಾತನಾಡಿ, ರಕ್ತದಾನವೆನ್ನುವಂತಹದ ಬಹಳಷ್ಟು ಶ್ರೇಷ್ಠವಾದ ದಾನವಾಗಿದ್ದು ಆಪತ್‌ಕಾಲದಲ್ಲಿ ಬಹಳಷ್ಟು ಜನರಿಗೆ ಇದರ ಅನುಕೂಲವಾಗುತ್ತದೆ ಎಂದ ಅವರು ಶಿಬಿರದಲ್ಲಿ ಸ್ವಂಯಂ ಪ್ರೇರಣೆಯಿಂದ ರಕ್ತದಾನ ಮಾಡಿದ ವಿದ್ಯಾರ್ಥಿ ಹಾಗೂ ಅಧ್ಯಾಪಕ ವೃಂದದವರನ್ನು ಅಭಿನಂದಿಸಿದರು.ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪದಾಧಿಕಾರಿಯಾದ ನಿಶಾಂತ್ ನಾರಾಯಣನ್ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News