ಮೂಡಬಿದ್ರೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ: ಸಚಿವ ಅಭಯಚಂದ್ರ ಜೈನ್
ಮಂಗಳೂರು, ಮಾ.19: ನಾಲ್ಕಾರು ನದಿಗಳು ಮೂಡಬಿದ್ರೆ ಆಸುಪಾಸಿನಲ್ಲಿ ಹರಿಯುತ್ತಿ ದ್ದರೂ ಇಲ್ಲಿಯವರೆಗೆ ಮೂಡಬಿದ್ರೆಗೆ ಬಹುಗ್ರಾಮ ಕುಡಿಯುವ ನೀರು ಅನುಷ್ಠಾನಗೊಂಡಿಲ್ಲ. ಆದ ಕಾರಣ ನೀರಾವರಿ ಇಲಾಖೆ, ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಯೋಜನೆ ಅನುಷ್ಠಾನಕ್ಕೆ ಕಾರ್ಯತಂತ್ರ ರೂಪಿಸುವಂತೆ ಯುವಜನ ಸೇವೆ, ಮೀನುಗಾರಿಕೆ ಖಾತೆ ಸಚಿವ ಅಭಯಚಂದ್ರ ಜೈನ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಇರುವೈಲು ಮತ್ತು ವಾಲ್ಪಾಡಿ ಗ್ರಾಮ ಪಂಚಾಯತ್‌ಗಳಿಗೆ ಸ್ವಂತ ಕಟ್ಟಡ ಹೊಂದಲು ಕೂಡಲೇ ನಿವೇಶನ ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
1.3 ಲಕ್ಷ ರೂ. ಅನುದಾನದಲ್ಲಿ 26 ಫಲಾನುಭವಿಗಳಿಗೆ ತಮ್ಮ ಪಾರಂಪರಿಕ ವೃತಿತಿ ಮುಂದುವರಿಸುವ ಮೂಲಕ ಆರ್ಥಿಕ ಅಭಿವೃದ್ದಿಗಾಗಿ ಉಚಿತವಾಗಿ ಸಲಕರಣೆಗಳನ್ನು ಮಾ.25 ರಂದು ವಿತರಿಸಲಾಗುವುದು. ರೂ. 2.20 ಲಕ್ಷ ವೆಚ್ಚದಲ್ಲಿ ಪಡುಪೆರಾರ ಮತ್ತು ಪಡು ಮಾರ್ನಾಡು ಗ್ರಾಮಗಳ 20 ಜನ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ತರಬೇತಿ ನೀಡಿದ್ದು ಅವರುಗಳಿಗೆ 20 ಹೊಲಿಗೆ ಯಂತ್ರಗಳನ್ನು ತಿಂಗಳಾಂತ್ಯದೊಳಗೆ ವಿತರಿಸುವುದಾಗಿ ಕೈಗಾರಿಕೆ ಮತುತಿ ವಾಣಿಜ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಚಿವರು ಸಭೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಆಗಿರುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.