×
Ad

ತುಳು ರಂಗಭೂಮಿಯಲ್ಲಿ ಮಹಿಳೆಯರು ವಿಶೇಷ ಕಾರ್ಯಕ್ರಮ

Update: 2016-03-19 19:40 IST

ಮಂಗಳೂರು, ಮಾ.19: ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸದಾನಂದ ಸುವರ್ಣ ದತ್ತಿನಿಧಿ ಸಹಯೋಗದಲ್ಲಿ ಸಿರಿ ಚಾವಡಿ ತುಳು ಭವನದಲ್ಲಿ ಶನಿವಾರ ನಡೆದ ‘ತುಳು ರಂಗಭೂಮಿಯಲ್ಲಿ ಮಹಿಳೆಯರು’ ವಿಶೇಷ ಕಾರ್ಯಕ್ರಮವನ್ನು ಶಾಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು.

ಅವಕಾಶ ಕೊರತೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನವಾಗಬೇಕು. ಮಹಿಳಾ ಕಲಾವಿದರ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ರಂಗಭೂಮಿ, ಯಕ್ಷಗಾನ ಸೇರಿದಂತೆ ಕಲಾಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದವರು ಅಭಿಪ್ರಾಯಿಸಿದರು.

ರಂಗ ಕಲಾವಿದೆ ಗೀತಾ ಸುರತ್ಕಲ್ ಮಾತನಾಡಿ, ತುಳು ರಂಗಭೂಮಿ ಜನಸಾಮಾನ್ಯರನ್ನು ವೇಗಾಗಿ ತಲುಪಲು ಸಾಧ್ಯವಾಗಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಎಂ, ಜಾನಕಿ ಬ್ರಹ್ಮಾವರ ಕಾರ್ುಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಈಗಾಗಲೇ 4 ದತ್ತಿನಿಧಿಗಳಿದ್ದು, ಈ ದತ್ತಿನಿಧಿಗಳಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಕಾಡೆಮಿಯಲ್ಲಿ ಇನ್ನೂ ಹೆಚ್ಚಿನ ದತ್ತಿನಿಧಿ ಸ್ಥಾಪಿಸಲು ಅವಕಾಶವಿದ್ದು, ತುಳು ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಂದ್ರಹಾಸ್ ರೈ ಬಿ. ಅಭಿಪ್ರಾಯಿಸಿದರು.

ಹಿರಿಯ ರಂಗಭೂಮಿ ಕಲಾವಿದರಾದ ಚಿತ್ರಾಂಜಲಿ, ಶಾರದಾ ಬಾರ್ಕೂರು, ಆನಂದ ಶೆಟ್ಟಿ, ರೋಹಿಣಿ ಜಗರಾಮ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ರಂಗಕರ್ಮಿ ಸದಾನಂದ ಸುವರ್ಣ, ರಂಗಭೂಮಿ ಕಲಾವಿದರಾದ ವೇದವತಿ, ಶಾಲಿನಿ ಉಮೇಶ್, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ.ಬಿ ಉಪಸ್ಥಿತರಿದ್ದರು.

ತುಳು ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕರಾದ ರೂಪಕಲಾ ಆಳ್ವ ಪ್ರಾಸ್ತಾವನೆಗೈದರು, ಡಿ.ಎಂ ಕುಲಾಲ್ ನಿರೂಪಿಸಿ, ರಘು ಇಡ್ಕಿದು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News