×
Ad

ಹಿರಿಯರ ತ್ಯಾಗದ ಜೀವನ, ಸಾಮಾಜಿಕ ಸಾಮರಸ್ಯದ ಬದುಕು ದ.ಕ. ಜಿಲ್ಲೆಗೆ ದೊಡ್ಡ ಆಸ್ತಿ: ಸಚಿವ ಯು. ಟಿ. ಖಾದರ್

Update: 2016-03-19 19:53 IST

ಹಿರಿಯರ ತ್ಯಾಗದ ಜೀವನ, ಸಾಮಾಜಿಕ ಸಾಮರಸ್ಯದ ಬದುಕು ದ.ಕ. ಜಿಲ್ಲೆಗೆ ದೊಡ್ಡ ಆಸ್ತಿ. ಅವರ ಮಾದರಿ ವ್ಯಕ್ತಿತ್ವವನ್ನು ಇಂದಿನ ಸಮುದಾಯ ಅರಿತು ಪರಸ್ಪರ ಸಹಬಾಳ್ವೆಯಿಂದ ಬದುಕಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕರ್ನಾಟಕ ಸರಕಾರದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಎಸ್ಸಿ; ಎಸ್‌ಟಿ ಸಾಧಕರ ಸಾಕ್ಷಚಿತ್ರಗಳ ಬಿಡುಗಡೆ ಸಮಾರಂಭದಲ್ಲಿ ಸಾಧಕರ ಸಾಕ್ಷಚಿತ್ರಗಳ ಆಯ್ದ ಭಾಗಗಳ ಪ್ರದರ್ಶನಕ್ಕೆ ಅವರು ಶನಿವಾರ ಚಾಲನೆ ನೀಡಿದರು.
ಭಾರತವು ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ದೇಶ. ವೈವಿಧ್ಯ ಸಂಸ್ಕೃತಿ, ಆಚರಣೆಗಳು ಇಲ್ಲಿವೆ. ಆಚಾರ-ವಿಚಾರಗಳಿಗೆ ಹೆಸರಾದ ದೇಶ ಇದಾಗಿದೆ. ಇಂತಹ ದೇಶದಲ್ಲಿ ಎಲ್ಲಾ ಜಾತಿ-ಧರ್ಮದವರು ಒಗ್ಗಟ್ಟಾಗಿ ಬದುಕು ಸಾಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ.ಜಾತಿ/ಪ.ಪಂಗಡದ ಸಾಧಕರಾದ ಡೀಕಯ್ಯ ಪದ್ಮುಂಜ ಹಾಗೂ ಪದ್ಮನಾಭ ನರಿಂಗಾನ ಅವರ ಸಾಕ್ಷಚಿತ್ರ ಬಿಡುಗಡೆ ಅನಂತರ ಅವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜೆ. ಆರ್. ಲೋಬೊ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಈ ಕಾರ್ಯಕ್ರಮದಿಂದಾಗಿ ಇತರ ಭಾಷೆ, ಜನಾಂಗಗಳಲ್ಲಿರುವ ಸಾಹಿತ್ಯದ ಮಿಲನವಾಗಲು ಸಾಧ್ಯವಾಗಿದೆ. ಸಾಮರಸ್ಯದ ಸಂದೇಶ ನೀಡಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.
ಅಕಾಡೆಮಿ ಅಧ್ಯಕ್ಷ ಬಿ. ಎ. ಮುಹಮ್ಮದ್ ಹನ್ೀ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಾರ್ಪೋರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ಕಾವೂರು ಬಂಟರ ಸಂಘದ ಅಧ್ಯಕ್ಷ ಎಂ. ಎಸ್. ಶೆಟ್ಟಿ ಸರಪಾಡಿ ಮುಖ್ಯ ಅತಿಥಿಗಳಾಗಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ರೊಹಾರಾ ಅಬ್ಬಾಸ್ ವಂದಿಸಿದರು. ಅಬ್ದುಲ್ ಲತ್ೀ ನೇರಳಕಟ್ಟೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News