ಮಾ.23;ನಗರದಲ್ಲಿ ಸ್ವಾತಂತ್ರದ ನಡೆಗೆ (ಆಝಾದಿ ಮಾರ್ಚ್),ಸಮಾವೇಶ
ಮಂಗಳೂರು.ಮಾ.19:ದೇಶದ ಸ್ವಾತಂತ್ರ ಹೋರಾಟದಲ್ಲಿ ಬ್ರಿಟೀಷರಿಂದ ಗಲ್ಲು ಶಿಕ್ಷೆಗೆ ಗುರಿಯಾದ ಭಗತ್ ಸಿಂಗ್,ರಾಜ್‌ಗುರು,ಸುಖದೇವ್ ಅವರು ಹತಾತ್ಮರಾದ ಮಾರ್ಚ್ 23ರಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಅಝಾದಿ ಮಾರ್ಚ್ (ಸ್ವಾತಂತ್ರದ ನಡಿಗೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಂಜೆ 3.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದ ವರೆಗೆ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸ್ವಾತಂತ್ರದ ನಡಿಗೆ ಕಾರ್ಯಕ್ರಮ ನಡೆಯಲಿದೆ;ಬಳಿಕ ಪುರಭವನದಲ್ಲಿ 4.30 ಗಂಟೆಗೆ ಅಝಾದಿ ಸಮಾವೇಶ ನಡೆಯಲಿದೆ.ಈ ಸಮಾವೇಶದಲ್ಲಿ ಕೂಡಲ ಸಂಗಮ ಪಂಚಮ ಸಾಲಿ ಮಹಾಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಾಡಿನ ಪ್ರಮುಖ ಚಿಂತಕ,ಪತ್ರಕರ್ತರು ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ,ಪತ್ರಕರ್ತ ಸುದಿಪ್ತೋ ಮೊಂಡಲ್ ಮೊದಲಾದವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದೇಶಕ್ಕೆ ಬ್ರಿಟೀಷರಿಂದ ಮಾತ್ರ ಸ್ವಾತಂತ್ರ ದೊರೆತರೆ ಸಾಲದು ದೇಶದೊಳಗಡೆಯ ಶೋಷಕರಿಂದಲೂ ಸ್ವಾತಂತ್ರ ದೊರೆಯಬೇಕಾಗಿದೆ.ಬ್ರಿಟೀಷರ ಸ್ಥಾನದಲ್ಲಿ ಈ ದೇಶದ ಶೋಷಕ ವರ್ಗ ಆಡಳಿತ ಚುಕ್ಕಾಣಿ ಹಿಡಿಯುವುದನ್ನು ನಾವು ಒಪ್ಪಲಾರೆವು ಎಂದು ಹೇಳಿದ ಭಗತ್ ಸಿಂಗ್‌ರ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ವಿವಿಧ ವಲಯಗಳಲ್ಲಿ ಶೋಷಣೆ ನಡೆಯುತ್ತಿದೆ.ಅಸಮಾನತೆಯ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಇಂದು ದೇಶ ದ್ರೋಹಿಗಳು ಎಂದು ಚಿತ್ರಿಸುವ ಪ್ರಯತ್ನ ನಡೆಯುತ್ತದೆ.ಈ ಹಿನ್ನೆಲೆಯಲ್ಲಿ ದೇಶ ಪ್ರೇಮದ ಬಹು ದೊಡ್ಡ ಉದಾಹರಣೆ ಆಗಿರುವ ಭಗತ್ ಸಿಂಗ್ ಹುತಾತ್ಮ ದಿನದಂದು ಅವರ ಸಮಾನತೆಯ ಆಶಯಗಳನ್ನು ನೆನಪಿಸಿ ‘ಅಸಮಾನತೆಯ ವಿರುದ್ಧ ,ಸ್ವಾತಂತ್ರಕ್ಕಾಗಿ ಎಂಬ ಘೋಷಣೆಯೊಂದಿಗೆ ಜಿಲ್ಲೆಯ ಹಲವು ವಿದ್ಯಾರ್ಥಿ, ಯುವಜನ, ದಲಿತ,ಮಹಿಳಾ, ಸಾಂಸ್ಕೃತಿಕ ಸಂಘಟನೆಗಳು ಸೇರಿ ಅಜಾದಿ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿ ೆ .ಡಿವೈಎಫ್‌ಐ, ಎಸ್‌ಎಫ್‌ಐ, ಎಐವೈಎಫ್, ಎಐಎಸ್‌ಎಫ್, ಜೆಎಂಎಸ್,ಬಿವಿಎಸ್,ಅಭಿಮತ ಪ್ರೊ.ಕೃಷ್ಣಪ್ಪ ಸ್ಥಾಪಿತ,ಹಾಗೂ ಅಂಬೇಡ್ಕರ್ ವಾದ ದಲಿತ ಸಂಘರ್ಷ ಸಮಿತಿ ಮಂಗಳೂರು ,ಸಮುದಾಯ ಮಂಗಳೂರು, ದಲಿತ ಹಕ್ಕುಗಳ ಸಮನ್ವಯ ಸಮಿತಿ ಮಂಗಳೂರು ಸೇರಿದ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟದೊಂದಿಗೆ ಈ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮುನೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾಸುದೇವ ಉಚ್ಚಿಲ್,ಎಂ.ದೇವದಾಸ್,ರಘು ಎಕ್ಕಾರ್,ವಿಶುಕುಮಾರ್,ದಯಾನಂದ ಶೆಟ್ಟಿ,ಸಂತೋಷ್ ಬಜಾಲ್,ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.