×
Ad

ಒಂದು ವರ್ಷಎಂಟು ತಿಂಗಳುಗಳಲ್ಲಿ ಉಳ್ಳಾಲ ಪ್ರಾಥಮಿಕಆರೋಗ್ಯಕೇಂದ್ರದ ಸಂಪೂರ್ಣಕಾಮಗಾರಿ ಪೂರ್ಣ: ಯು.ಟಿ.ಖಾದರ್

Update: 2016-03-19 22:12 IST

ಉಳ್ಳಾಲ: ಒಂದು ವರ್ಷಎಂಟು ತಿಂಗಳುಗಳಲ್ಲಿ ಉಳ್ಳಾಲ ಪ್ರಾಥಮಿಕಆರೋಗ್ಯಕೇಂದ್ರದ ಸಂಪೂರ್ಣಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಉಳ್ಳಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯಆರೋಗ್ಯಕೇಂದ್ರದ ಅಧಿಕಾರಿಗಳ ಜತೆಗಿನಕಾಮಗಾರಿ ವೀಕ್ಷಣೆ ನಡೆಸಿ ಮಾತನಾಡಿದರು. ಉಳ್ಳಾಲ ನಗರದಲ್ಲಿಜನರಿಗೆ ಬಹು ಉಪಯುಕ್ತ ಸಮುದಾಯಆರೋಗ್ಯಕೇಂದ್ರದ ನಿರ್ಮಾಣಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರದಲ್ಲಿಆಗಿರುವ ಕೆಲಸ, ಆಗಬೇಕಾದಕಾಮಗಾರಿ ಹಾಗೂ ಸದ್ಯಆಗಿರುವಕಾಮಗಾರಿಯನ್ನು ಅವಲೋಕನ ಭೇಟಿಯಉದ್ದೇಶವಾಗಿದ್ದು, ಅಧಿಕಾರಿಗಳು ಈ ಕುರಿತ ವರದಿಯನ್ನು ಸಂಗ್ರಹಿಸಿದ್ದಾರೆ. ಒಂದು ವರ್ಷಎಂಟು ತಿಂಗಳಲ್ಲಿ ಉತ್ತಮವಾಗಿಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ.ಕೇಂದ್ರದಲ್ಲಿತುರ್ತು ನಿಗಾ ಘಟಕ, ಹೊರರೋಗಿಚಿಕಿತ್ಸಾ ವಿಭಾಗ, ಡಯಾಲಿಸಿಸ್ ಕೇಂದ್ರ, ಸ್ಪೀಚ್ ಥೆರಪಿ, ಮಗು ಚಿಕಿತ್ಸಾಕೇಂದ್ರವನ್ನು, ಸುಸಜ್ಜಿತ ಲ್ಯಾಬ್, ಉತ್ತಮ ಫಾರ್ಮಸಿ, ಕೋಲ್ಡ್ ಸ್ಟೋರೇಜ್ ಶವಾಗಾರ ಹೊಂದಿರುತ್ತದೆ. ಗ್ರಾಮೀಣ ಪ್ರದೇಶದ ಮಂದಿ ಚಿಕಿತ್ಸೆಗೆ ಮಂಗಳೂರಿನ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿರುವುದರಿಂದ, ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಮುದಾಯಆರೋಗ್ಯಕೇಂದ್ರದ ನಿರ್ಮಾಣಆರೋಗ್ಯ ಇಲಾಖೆ ಕೈಗೊಂಡಿದೆ. ಈ ಸಂದರ್ಭಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಜಿಲ್ಲಾಆರೋಗ್ಯಅಧಿಕಾರಿಡಾ.ರಾಮಕೃಷ್ಣರಾವ್, ಸರ್ವಲೆನ್ಸ್‌ಅಧಿಕಾರಿಡಾ.ರಾಜೇಶ್, ಉಳ್ಳಾಲ ನಗರಸಭೆಅಧ್ಯಕ್ಷ ಹುಸೈನ್‌ಕುಂಞಿಮೋನು, ಉಪಾಧ್ಯಕ್ಷೆಚಿತ್ರಕಲಾಚಂದ್ರಕಾಂತ್, ಉಳ್ಳಾಲ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಈಶ್ವರ್ ಉಳ್ಳಾಲ್, ಉಳ್ಳಾಲ ಪ್ರಾಥಮಿಕಆರೋಗ್ಯಕೇಂದ್ರದ ವೈದ್ಯೆಯಶವಂತಿ ಪಟೇಲ್, ಮುಖ್ಯಇಂಜಿನಿಯರ್‌ಉದಯಶಂಕರ್, ಸಹಾಯಕಇಂಜಿನಿಯರ್‌ರಘುಚಂದ್ರ ಹೆಬ್ಬಾರ್, ಸೈಟ್‌ಇಂಜಿನಿಯರ್‌ಅಶೋಕ್‌ಕುಮಾರ್, ಮಾಜಿಅಧ್ಯಕ್ಷೆಗಿರಿಜಾ ಬಾ , ಮಾಜಿಉಪಾಧ್ಯಕ್ಷೆರಝಿಯಾಇಬ್ರಾಹಿಂ, ಸ್ಥಾಯಿ ಸಮಿತಿಅಧ್ಯಕ್ಷಅಬ್ದುಲ್ ಫತಾಕ್, ಸದಸ್ಯರಾದ ಮಹಮ್ಮದ್ ಮುಕ್ಕಚ್ಚೇರಿ, ಮುಸ್ತಾಫ ಉಳ್ಳಾಲ್, ಫಾರುಕ್ ಉಳ್ಳಾಲ್, ಕಾಂಗ್ರೆಸ್ ಮುಖಂಡಅಹಮ್ಮದ್ ಬಾವಾ ಕೊಟ್ಟಾರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News