ಉಳ್ಳಾಲ: ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮ
ಉಳ್ಳಾಲ: ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮವು ಮಾ.21ರಿಂದ 26ರವೆರೆಗೆ ನಡೆಯಲಿದೆ ಎಂದು ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಾಬು ಶಾಸ್ತಾ ಕಿನ್ಯಾ ಹೇಳಿದರು.
ಅವರು ಕಿನ್ಯ ಬೆಳರಿಂಗೆ ಭಂಡಾರಮನೆಯಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಕಾರ್ಯಕ್ರಮಗಳ ಕುರಿತ ವಿವರ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ಮಾ.21ರಂದು ಸಂಜೆ 3.30ಕ್ಕೆ ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಿಂದ ಹೊರಡುವ ಹಸಿರು ಹೊರೆಕಾಣಿಕೆ ಶೋಭಾಯಾತ್ರೆಗೆ ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಚಾಲನೆ ನೀಡಲಿದ್ದಾರೆ. ಮಾ.22ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೊಳ್ಳಲಿದ್ದು ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.23ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ಸಂಘ-ಸಂಸ್ಥೆಗಳಿಂದ ಭಜನಾ ಸೇವೆ, 108 ತೆಂಗಿನಕಾಯಿ ಗಣಪತಿ ಯಾಗ, ಸಂಜೆ ನಡೆಯುವ ಧಾರ್ಮಿಕ ಸಭೆ ನಡೆಯಲಿದೆ. ಮಾ.24ರಂದು ಬೆಳಗ್ಗೆ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಮಾ.26ರಂದು ಧರ್ಮನೇಮ ನಡೆಯಲಿದೆ. ಮಾ.24ರಂದು ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಿತ್ಯಾನಂದ ಯೋಗಾಶ್ರಮದ ಶ್ರೀ ಕ್ಷೇತ್ರ ಕೊಂಡೆವೂರು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಅಧ್ಯಕ್ಷ ಕುದ್ರೋಳಿ ನವೀನ್‌ಚಂದ್ರ ಸುವರ್ಣ ವಹಿಸಲಿದ್ದಾರೆ.
ಈ ವೇಳೆ ಪ್ರತಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಟಿ.ಸುವರ್ಣ, ಕಾರ್ಯಾಧ್ಯಕ್ಷ ಕೆ.ಪಿ ಸುರೇಶ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕೋಶಾಧಿಕಾರಿ ವಾಮನ ಪೂಜಾರಿ ಬೆಳರಿಂಗೆ, ಉದ್ಯಮಿ ಭಾಸ್ಕರ್ ಉಪಸ್ಥಿತರಿದ್ದರು.
ಪ್ರವೀಣ್ ಕುಂಪಲ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಹಿನ್ನೆಲೆ : 400 ವರ್ಷಗಳ ಹಿಂದೆ ಬಿಲ್ಲವ ಸಮಾಜದ ತೋಮು ಹೆಂಗಸು ಎಂಬವರನ್ನು ಹಿಂಬಾಲಿಸಿಕೊಂಡು ಬಂದಂತಹ ಶ್ರೀ ದೈವಗಳ ಭಂಡಾರಮನೆ ವಿವಿಧ ಕಾರಣ ಹಾಗೂ ಆರ್ಥಿಕ ಕೊರತೆಯಿಂದ ಶಿಥಿಲಾವಸ್ಥೆಯಲ್ಲಿತ್ತು. ಆದರೂ ಇಲ್ಲಿ ದೈವ-ದೇವರುಗಳ ಸೇವೆ ನಿರಂತರ ನಡೆಯುತ್ತಾ ಬಂದಿತ್ತು. ಕ್ಷೇತ್ರ ಪುನರ್ ನವೀಕರಣದ ನಿಟ್ಟಿನಲ್ಲಿ 5015ರಲ್ಲಿ ಅಷ್ಟಮಂಗಲ ಪ್ರಶ್ನೆ ಮೂಲಕ ಜೀರ್ಣೋದ್ಧಾರ ಸಮಿತಿ ಮತ್ತು ಟ್ರಸ್ಟ್ ಸ್ಥಾಪಿಸಲಾಗಿತ್ತು. ಇದೀಗ ಕೆಂಪುಕಲ್ಲು ಕೆತ್ತನೆ ಮೂಲಕ ವಿಶಿಷ್ಠ ಶೈಲಿಯಲ್ಲಿ ಸುಮಾರು 1.50 ಕೋಟಿ ವೆಚ್ಚದ ಭಂಡಾರಮನೆ ನಿರ್ಮಾಣಗೊಂಡಿದೆ