×
Ad

ಮಾರ್ಚ್ 20ರಂದು ಫರಂಗಿಪೇಟೆಯಲ್ಲಿ ಸಲಫಿ ಸಮಾವೇಶ

Update: 2016-03-19 22:34 IST

ಮಂಗಳೂರು, ಮಾ. 19: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವತಿಯಿಂದ ಮಾರ್ಚ್ 20ರಂದು ಮಧ್ಯಾಹ್ನ 1:30ರಿಂದ ರಾತ್ರಿ 9:30ರವರೆಗೆ ಫರಂಗಿಪೇಟೆ ಸಲಫಿ ಮಸೀದಿ ವಠಾರದಲ್ಲಿ ಸಲಫಿ ಸಮಾವೇಶ ನಡೆಯಲಿದೆ.

ಮಧ್ಯಾಹ್ನ 1:30ರಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಮಹಿಳಾ ಸಮಾವೇಶದಲ್ಲಿ ಮೆಹ್ತಾಬ್ ಉಮ್ಮು ಮುನಾ, ಮುಮ್ತಾಝ್ ಬಿನ್ತ್ ಶಂಶುದ್ದೀನ್ ಮತ್ತು ನೂರ್‌ಜಹಾನ್ ಸ್ವಲಾಹಿಯ್ಯ ಅವರು ಪ್ರವಚನ ನೀಡಲಿದ್ದಾರೆ. ಸಂಜೆ 4:30ರಿಂದ ರಾತ್ರಿ 9:30ರವರೆಗೆ ನಡೆಯುವ ಸಮಾವೇಶದಲ್ಲಿ ವೌಲವಿ ಸಜ್ಜಾದ್ ಸಖಾಫಿ, ವೌಲವಿ ನಾಸಿರುದ್ದೀನ್ ರಹ್ಮಾನಿ ಮತ್ತು ವೌಲವಿ ಮುಜೀಬ್ ತಚ್ಚಂಬಾರ ಮುಂತಾದವರು ಪ್ರವಚನ ನೀಡಲಿದ್ದಾರೆ. ಸಲಫಿ ಮೂವ್‌ಮೆಂಟ್‌ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ ಮತ್ತು ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎಸ್‌ಕೆಎಸ್‌ಎಂನ ಫರಂಗಿಪೇಟೆ ಘಟಕದ ಅಧ್ಯಕ್ಷ ಸೈಯದ್ ಬಾವಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News