×
Ad

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಹೆಚ್ಚಾಗಲಿ: ಪ್ರೊ.ಭೈರಪ್ಪ

Update: 2016-03-19 23:33 IST

ಉಡುಪಿ, ಮಾ.19: ಕಾಲೇಜು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಯಾವುದೇ ರೀತಿಯ ಸಂಶೋಧನಾ ಕಾರ್ಯಕ್ರಮಕ್ಕೆ ಮಂಗಳೂರು ವಿವಿ ಎಲ್ಲ ರೀತಿಯ ಮಾರ್ಗದರ್ಶನ ನೀಡಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಲೇಜಿನ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತ ನಾಡುತ್ತಿದ್ದರು. ಮಂಗಳೂರು ವಿವಿಯ ಅಂತರ್ಜಾಲ ಗ್ರಂಥಾಲಯದಲ್ಲಿ ಎಲ್ಲ ರೀತಿಯ ಸಂಶೋಧನಾ ಗ್ರಂಥಗಳು ಲಭ್ಯವಿದ್ದು, ಇವುಗಳ ಸದುಪಯೋಗವನ್ನು ವಿದ್ಯಾ ರ್ಥಿಗಳು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆಯನ್ನು ಉಡುಪಿ ಕೆಥೋ ಲಿಕ್ ಶಿಕ್ಷಣ ಸೊಸೈಟಿಯ ರೆ.ಫಾ.ಡಾ. ಲಾರೆನ್ಸ್ ಡಿಸೋಜ ವಹಿಸಿದ್ದರು. ಈ ಸಂದಭರ್ ಕಾಲೇಜಿನ ಮೈನರ್ ರೀಸರ್ಚ್ ಪ್ರಾಜೆಕ್ಟ್ ಪುಸ್ತಕ ಬಿಡು ಗಡೆಗೊಳಿಸಲಾಯಿತು. ರ್ಯಾಂಕ್ ವಿಜೇತ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿ ಸಲಾಯಿತು.

ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಡಾ.ನೇರಿ ಕರ್ನೇಲಿಯೊ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವರದಿಯನ್ನು ಸಮಿತಿಯ ಕಾರ್ಯದರ್ಶಿ ವಿಲ್ಟನ್ ಸಲ್ದಾನ ವಾಚಿಸಿದರು. ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸವಿತಾ ಹೆಬ್ಬಾರ್, ವಿದ್ಯಾರ್ಥಿ ಪರಿಷತ್‌ನ ಶೇಖರ್ ಬೈಕಾಡಿ ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ರೆ.ಫಾ.ಸ್ಟ್ಯಾನಿ ವಿ. ಲೋಬೊ ಸ್ವಾಗತಿಸಿದರು. ಸ್ಟಾಪ್ ಕೌನ್ಸಿಲ್‌ನ ಕಾರ್ಯದರ್ಶಿ ಶೈಲೆಟ್ ಮ್ಯಾಥ್ಯೂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News