×
Ad

ಕಾಸರಗೋಡು: ದಾಖಲೆ ಬೆಲೆಯಿದ್ದರೂ ಫಸಲಿಲ್ಲ; ಸಂಕಷ್ಟದಲ್ಲಿ ಗೇರು ಬೆಳೆಗಾರರು

Update: 2016-03-19 23:35 IST

 ಕಾಸರಗೋಡು, ಮಾ.19: ಗೇರುಬೀಜದ ದರ ದುಪ್ಪಟ್ಟಾಗಿದ್ದರೂ ಈ ಬಾರಿ ಉತ್ಪಾದನೆ ಕುಸಿ ದಿದೆ. ಕಾಸರಗೋಡಿನಲ್ಲಿ ಬೆಲೆ ಕೆಜಿಗೆ 102 ರೂ.ಗಳಿಂದ 105ರ ತನಕ ತಲುಪಿದೆ. ಕಳೆದ ಅವಧಿ ಯಲ್ಲಿ ಕೆಜಿಗೆ 40 ರೂ.ನಿಂದ 50 ರೂ. ಮಾತ್ರ ಲಭಿಸುತ್ತಿತ್ತು. ಆದರೆ ಈ ಬಾರಿ ದರ ಹೆಚ್ಚಳ ಗೊಂಡರೂ ಬೆಳೆಗಾರರಿಗೆ ನಿರಾಶೆ ಉಂಟಾ

ಗಿದೆ. ಫಸಲು ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಫೆಬ್ರವರಿಯಿಂದ ಮೇ ಮಧ್ಯದವರೆಗೆ ಗೇರು ಫಸಲು ಲಭಿಸುತ್ತದೆ. ಆದರೆ ಈ ವರ್ಷ ಮಾರ್ಚ್ ಅರ್ಧ ಕಳೆದರೂ ಫಸಲೇ ಗೋಚರಿಸುತ್ತಿಲ್ಲ. ಹಲವೆಡೆ ಈಗಷ್ಟೇ ಹೂ ಬಿಟ್ಟಿದೆ. ಇನ್ನೂ ಹಲವೆಡೆ ಹವಾಮಾನ ವೈಪರೀತ್ಯದಿಂದ ಹೂಗಳು ಕರಟಿ ಹೋಗಿವೆ. ಕೆಲ ವರ್ಷಗಳ ಹಿಂದೆ ಗೇರು ತೋಟಗಳು ಎಲ್ಲೆಲ್ಲೂ ಗೋಚರಿಸುತ್ತಿತ್ತು. ಆದರೆ ಗೇರು ಬೆಲೆ ಕುಸಿದು ರಬ್ಬರಿಗೆ ಬೆಲೆ ಏರಿಕೆಯಾದದ್ದೇ ತಡ, ಗೇರು ಬೆಳೆಗಾರರು ಗೇರು ಮರಗಳನ್ನು ಕಡಿದು, ರಬ್ಬರ್ ಮರಗಳನ್ನು ನೆಟ್ಟು ಪೋಷಿಸಿದ್ದರು. ಮರಗಳ ಮಾರಣ ಹೋಮದ ಪರಿಣಾಮ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಗೇರುಮರ ಅಪರೂಪವಾಗಿ ಬಿಟ್ಟಿದೆ. ಈಗ ರಬ್ಬರ್‌ಗೆ ಬೆಲೆಯೇ ಇಲ್ಲದಂತಾಗಿದ್ದು, ಗೇರು ಬೀಜಕ್ಕೆ ದಾಖಲೆಯ ದರ ಲಭಿಸುತ್ತಿದೆ. ರಾಜ್ಯದಲ್ಲಿ ಅತ್ಯಧಿಕ ಗೇರುಬೀಜ ಉತ್ಪಾದಿಸುವ ಜಿಲ್ಲೆಯಾದ ಕಾಸರಗೋಡಿನಲ್ಲಿ ಗೇರು ಬೆಳೆ ಗಣನೀಯವಾಗಿ ಕುಸಿದಿದೆ. ಫಸಲು ಕುಸಿದಂತೆ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗತೊಡಗಿದೆ. ಸಮೀಕ್ಷೆ ಪ್ರಕಾರ 2013-14ರಲ್ಲಿ ಜಿಲ್ಲೆಯಲ್ಲಿ 7,811 ಹೆಕ್ಟೇರ್ ಸ್ಥಳದಲ್ಲಿ ಗೇರು ಬೆಳೆಸಲಾಗುತ್ತಿತ್ತು. ಆದರೆ 2016ರಲ್ಲಿ 6,193 ಹೆಕ್ಟೇರ್ಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News