ಅಲಾಸ್ಕದಲ್ಲಿ 6.2ರ ತೀವ್ರತೆಯ ಭೂಕಂಪ
Update: 2016-03-19 23:45 IST
ವಾಶಿಂಗ್ಟನ್, ಮಾ. 19: ಅಮೆರಿಕದ ಅಲಾಸ್ಕ ರಾಜ್ಯದ ಕರಾವಳಿಯಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆ ಹೊಂದಿರುವ ಭೂಕಂಪ ಮೇಲ್ಪದರದಲ್ಲಿ ಸಂಭವಿಸಿದೆ ಎಂದು ಅಮೆರಿಕದ ಪರಿಣತರು ಹೇಳಿದ್ದಾರೆ. ಭೂಕಂಪದಿಂದ ಉಂಟಾಗಿರಬಹುದಾದ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ಅಲಾಸ್ಕ ರಾಜ್ಯದ ಆ್ಯಟ್ಕದ ದಕ್ಷಿಣಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಪೆಸಿಫಿಕ್ ಸಮುದ್ರದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸ್ಥಳೀಯ ಸಮಯ ಶುಕ್ರವಾರ ಸಂಜೆ 5.35ಕ್ಕೆ ಭೂಕಂಪ ಸಂಭವಿಸಿತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಹೇಳಿದೆ.