×
Ad

ಅಪಾಯಕಾರಿ ವ್ಯಕ್ತಿಗಳ ಕೈಯಲ್ಲಿ ಅಂಬೇಡ್ಕರ್: ಡಾ.ವಿಶ್ವನಾಥ್ ಆತಂಕ

Update: 2016-03-19 23:54 IST

ಕಲ್ಯಾಣಪುರ, ಮಾ.19: ಡಾ.ಬಿ.ಆರ್.ಅಂಬೇಡ್ಕ್ ಅವರು ಅಪಾಯಕಾರಿ ವ್ಯಕ್ತಿಗಳು ಹಾಗೂ ಪಕ್ಷದ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಬಳಸಿಕೊಂಡೇ ದೇಶದ ಬಹುಸಂಖ್ಯಾತ ಜನರ ಮೇಲೆ ಪ್ರಹಾರ ನಡೆಸುವ ಹುನ್ನಾರವನ್ನು ಈ ವ್ಯಕ್ತಿಗಳು ನಡೆಸುತ್ತಿದ್ದಾರೆ ಎಂದು ಮಂಗಳೂರು ವಿವಿಯ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿಶ್ವನಾಥ್ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಮಾನ ಅವಕಾಶ ಕೇಂದ್ರ (ಎಸ್ಸಿ/ಎಸ್ಟಿ ಸೆಲ್)ವು, ಮಂಗಳೂರು ವಿವಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಭಾರತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಕಾನೂನು ಶಾಲೆಗಳ ಸಹಯೋಗದೊಂದಿಗೆ ಇಂದು ಕಾಲೇಜಿ ನಲ್ಲಿ ಆಯೋಜಿಸಿದ್ದ ‘ಡಾ. ಅಂಬೇಡ್ಕರ್: ಭಾರತದ ಬೆಳಕು’ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರಾ ನಂತರ ಅಂಬೇಡ್ಕರ್ ಅವರನ್ನು ನಾವು ಮೂರು ಕಾಲಘಟ್ಟದಲ್ಲಿ ಅವಲೋಕಿಸ ಬಹುದು. ಮೊದಲ ಕಾಲಘಟ್ಟ ದೇಶಕ್ಕೆ ಸ್ವಾತಂತ್ರ ಸಿಕ್ಕಿದಂದಿನಿಂದ ಅವರು ಸಾಯುವವರೆಗೆ (1956). ಈ ಕಾಲಘಟ್ಟದಲ್ಲಿ ಸಮಾಜ ಮತ್ತು ಸರಕಾರ ಅವರನ್ನು ಅತ್ಯಂತ ನಿರ್ಲಕ್ಷದಿಂದ ನಡೆಸಿ ಕೊಂಡಿತು. ಹಿಂದು ಕೋಡ್‌ಬಿಲ್ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರಿಗೆ ಯಾವುದೇ ರಾಜಕೀಯ ಸ್ಥಾನ ಮಾನ ನೀಡಲಿಲ್ಲ.

ಎರಡನೆ ಕಾಲಘಟ್ಟ 1956ರಿಂದ 1989ರಲ್ಲಿ ವಿ.ಪಿ.ಸಿಂಗ್ ಪ್ರಧಾನ ಮಂತ್ರಿಯಾಗುವವರೆಗೆ. ಈ ಸಮಯದಲ್ಲಿ ಅವರ ವಿಚಾರಧಾರೆ, ಅವರ ಚಿಂತನೆಗಳು ಜನರನ್ನು ತಲುಪದಂತೆ, ಜನರ ಮನಸ್ಸಿನಿಂದ ಅಳಿಸುವಂತೆ ಮಾಡುವ ಹುನ್ನಾರ ವಿವಿಧ ರಾಜಕೀಯ ಪಕ್ಷಗಳಿಂದ ನಡೆಯಿತು. ಅವರ ರಾಜಕೀಯ, ಅರ್ಥವ್ಯವಸ್ಥೆ, ಜಾತಿ, ಧರ್ಮಗಳ ಕುರಿತು ಬರೆದಿರುವುದು ಜನರಿಗೆ ತಲುಪದಂತೆ ನೋಡಿಕೊಳ್ಳಲಾಯಿತು.

ಮೂರನೆ ಕಾಲಘಟ್ಟದಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾದ ಬಳಿಕ ಇಡೀ ವ್ಯವಸ್ಥೆಯನ್ನು ಬದಲಿಸಿದರು. ಅಂಬೇಡ್ಕರ್ ಅವರ ವಿಚಾರಧಾರೆ, ಚಿಂತನೆ, ಸಾಹಿತ್ಯ ಜನಸಾಮಾನ್ಯರನ್ನು ತಲುಪು ವಂತೆ ನೋಡಿಕೊಂಡರು. 1991ರಲ್ಲಿ ಅಂಬೇ ಡ್ಕರ್‌ಗೆ ‘ಭಾರತರತ್ನ’ ಪ್ರದಾನಿಸಿದ ಮೇಲೆ ಅಂಬೇಡ್ಕರ್ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಧೋರಣೆ ಒಮ್ಮಿಂದೊಮ್ಮೆಗೆ ಬದಲಾಗಿ ಅವರನ್ನು ಆರಾಧಿಸತೊಡಗಿದವು. ಅವರು ನಮ್ಮವ ರೆಂದು ಪ್ರತಿಪಾದಿಸಲು ಮೇಲಾಟವೇ ನಡೆಯ ತೊಡಗಿತು ಎಂದು ಡಾ.ವಿಶ್ವನಾಥ್ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ. ಅಂಬೇಡ್ಕರ್ ಅಭಿಯಾನದ ಸಲಹಾ ಸಮಿತಿಯ ಸದಸ್ಯ ಪ್ರೊ.ಕೆ.ಫಣಿರಾಜ್ ಮಾತನಾಡಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ನೇರಿ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಹಿರಿಯ ಚಿಂತಕ ಶಿವಸುಂದರ್ ಹಾಗೂ ಡಾ.ಅಂಬೇಡ್ಕರ್ ಅಭಿಯಾನದ ಸಂಚಾಲಕ ಪ್ರದೀಪ್ ರಾಮವತ್, ವಿದ್ಯಾರ್ಥಿನಿ ನಯನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಿಲಾಗ್ರಿಸ್ ಕಾಲೇಜು ಸಮಾನ ಅವಕಾಶ ಕೇಂದ್ರದ ನಿರ್ದೇಶಕ ಪ್ರೊ.ಸಿರಿಲ್ ಮೆಥಾಯಸ್ ಸ್ವಾಗತಿಸಿದರು. ಅರ್ಪಣಾ ಕಾರ್ಯಕ್ರಮ ನಿರ್ವಹಿಸಿದರು. ಅಮಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News