ಭಾರತ್ ಮಾತಾಕಿ ಜೈ ವಿವಾದ ನ್ಯಾಯಯುತವಲ್ಲ: ಅಮಿತ್ ಶಾ
ಹೊಸದಿಲ್ಲಿ, ಮಾರ್ಚ್.20: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಬೈಠಕ್‌ನ್ನು ಸಂಬೋಧಿಸುತ್ತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಯಾವುದೇ ಪರಿಸ್ಥಿತಿಯಲ್ಲಿಯೂ ದೇಶದ ಅಪಮಾನ ಸಹಿಸುವಂತಿಲ್ಲ. ದೇಶದಲ್ಲಿ ಕುರಿತು ಸ್ಫೋಟಗೊಂಡ ಚರ್ಚೆಯ ಕುರಿತು ದೃಢ ನಿಲುವನ್ನು ವ್ಯಕ್ತಪಡಿಸುತ್ತಾ ಅವರು ದೇಶ ವಿರೋಧಿ ಯಾವುದೇ ಮಾತನ್ನು ಬಿಜೆಪಿ ಸಹಿಸುವುದಿಲ್ಲ. ಭಾರತ್ ಮಾತಾಕಿ ಜೈ ಘೋಷಣೆ ವಿವಾದಾಸ್ಪದವಲ್ಲ. ರಾಷ್ಟ್ರಧ್ವಜ ಹಾರಿಸುವುದು ಅಥವಾ ಭಾರತ್ ಮಾತಾಕಿ ಜೈ ಹೇಳುವುದು ರಾಷ್ಟ್ರವಾದದ ಸಹಜ ಅಭಿವ್ಯಕ್ತಿ. ಆದ್ದರಿಂದ ಈವಿಷಯದಲ್ಲಿ ವಿವಾದ ಹುಟ್ಟುಹಾಕುವುದು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಭಗತ್‌ಸಿಂಗ್ ಮತ್ತು ರಾಜ್‌ಗುರುರಂತಹ ಕ್ರಾಂತಿಕಾರಿಗಳ ತುಟಿಯಲ್ಲಿ ಹುತಾತ್ಮೆಯ ಸಮಯದಲ್ಲಿ ಭಾರತ್ ಮಾತಾಕಿ ಜೈಘೋಷಣೆಯಿತ್ತು. ಆರೆಸ್ಸೆಸ್ ಮತು ಬಿಜೆಪಿ ಆರಂಭಗೊಳ್ಳುವ ಮೊದಲೇ ಸ್ವಾತಂತ್ರ್ಯ ಸೇನಾನಿಗಳು ಭಾರತ್ ಮಾತಾಕಿ ಜೈ ಘೋಷಣೆ ಕೂಗಿಯೇ ತಮ್ಮನ್ನು ಬಲಿದಾನ ನೀಡುತ್ತಿದ್ದರು ಎಂದು ಅಮಿತ್ ಶಾ ವಿಷದ ಪಡಿಸಿದರು. ಜೆಎನ್‌ಯುನಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಲಾಯಿತೆನ್ನುವುದರ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮೇಲೆ ದಾಳಿ ನಡೆಸಿ ದೇಶ ವಿರೋಧಿ ಘೋಷಣೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪ ನಡೆಯದು ಎಂದು ಗುಡುಗಿದ್ದಾರೆ. ಮೋದಿ ಸರಕಾರವನ್ನು ಹೊಗಳುತ್ತಾ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಜನಾಂಗೀಯತೆ ಮುಕ್ತ ನಾಯಕತ್ವ ನೀಡಲು, ಜನರಿಗೆ ಸ್ಥಿರತೆಯ ಸ್ಥಿತಿ ಹಾಗೂ ನಿರೀಕ್ಷೆ ಹುಟ್ಟಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸಮಾಡಿದೆ ಎಂದ ಅಮಿತ್ ಶಾ ವಿಪಕ್ಷಗಳು ಮೋದಿ ಸರಕಾರ ಕೆಲಸ ಮಾಡುವುದಿಲ್ಲ ಎನ್ನುತ್ತಿವೆ. ಕಾಂಗ್ರೆಸ್ ಪಕ್ಷ ಮೋದಿಯ ವಿರುದ್ಧ ನಿರಂತರ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಅವರು ದೂರಿದರು.