ಉಪ್ಪಿನಂಗಡಿ : ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತ್ಯು; ಆರೋಪ

Update: 2016-03-20 07:18 GMT

ಉಪ್ಪಿನಂಗಡಿ, ಮಾ.20: ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಪತ್ನಿಯ ಹೆರಿಗೆಯ ಬಳಿಕ ಉಂಟಾದ ಅತೀ ರಕ್ತಸ್ತ್ರಾವಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಪತ್ನಿಯ ಸಾವಿಗೆ ಕಾರಣರಾಗಿದ್ದಾರೆಂದು ಆರೋಪಿಸಿ ನೆಲ್ಯಾಡಿಯ ವ್ಯದ್ಯ ದಂಪತಿಗಳ ವಿರುದ್ದ ಪೊಲೀಸ್ ಇಲಾಖೆಗೆ ದಲಿತ ದೌರ್ಜನ್ಯ ಕಾಯಿದೆಯಡಿ ದೂರು ನೀಡಿದ ಘಟನೆ ಉಪ್ಪಿನಂಗಡಿಯಿಂದ ಶನಿವಾರ ವರದಿಯಾಗಿದೆ.

ನೆಲ್ಯಾಡಿ ಜಾರಿಗೆದಡ್ಕ ನಿವಾಸಿ ಉಮೇಶ್ ಜಿ ಎಂಬವರ ಪತ್ನಿ ವಸಂತಿ (36) ಅವರನ್ನು ಮೂರನೇ ಹೆರಿಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಶುಕ್ರವಾರ ಮಗುವಿಗೆ ಜನ್ಮ ನೀಡಿದ್ದರು.

ಮಗು ಆರೋಗ್ಯದಿಂದಿದೆಯಾದರೂ ಬಳಿಕ ಉಂಟಾದ ಅತೀ ರಕ್ತಸ್ತ್ರಾವ ನಿಯಂತ್ರಣಕ್ಕೆ ಬಾರದೇ ಸಮಸ್ಯೆಯುಂಟಾದಾಗ ಕೂಡಲೇ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅತೀ ರಕ್ತಸ್ತ್ರಾವಕ್ಕಿಡಾದ ವಸಂತಿ ದಾರಿ ಮಧ್ಯೆ ಸಾವನ್ನಪ್ಪಿದ್ದು, ಮಂಗಳೂರಿನಲ್ಲಿ ವೈದ್ಯರು ಸಾವನ್ನು ದೃಢೀಕರಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ತಮ್ಮನ್ನು ಪರಿಶಿಷ್ಠ ಪಂಗಡದ ವ್ಯಕ್ತಿಗಳೆಂದು ನಿರ್ಲಕ್ಷಿಸಿ, ಅಗತ್ಯ ಚಿಕಿತ್ಸೆಗೆ ನಾವು ಹಣ ಪಾವತಿಸುವಷ್ಟು ಸಮರ್ಥರಲ್ಲ ಎಂದು ಭಾವಿಸಿ ನನ್ನ ಪತ್ನಿಯನ್ನು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ಯಲು ಸೂಚಿಸಿದ್ದಾರೆಂದೂ ಆರೋಪಿಸಿ ಉಮೇಶ್ ಜಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ , ತನಿಖೆ ನಡೆಸುತ್ತಿದ್ದಾರೆ.

ವೈದ್ಯಕೀಯ ಪರೀಕ್ಷೆಯ ವರದಿಯನ್ನಾಧರಿಸಿ ಮುಂದಿನ ಕ್ರಮ ಜರಗಿಸಲಾಗುವುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News