×
Ad

ಹೋಳಿ ಆಚರಣೆಗೆ ನೀರು ಬಳಸಿದರೆ ಕೈ ಮುರಿಯಿರಿ : ರಾಜ್‌ಠಾಕ್ರೆ

Update: 2016-03-20 12:40 IST

ಥಾಣೆ, ಮಾರ್ಚ್.20: ಮಹರಾಷ್ಟ್ರ ನವ ನಿರ್ಮಾಣ ಸೇನೆಯ ಪ್ರಮುಖ್‌ ರಾಜ್‌ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ರಾಜ್ಯದಲ್ಲಿ ನೀರಿನ ಕೊರತೆ ಇರುವುದರಿಂದ ಜನರೊಂದಿಗೆ ಕೈ ಜೋಡಿಸಿ ಸೂಖಿ(ಶುಷ್ಕ) ಹೋಳಿ ಆಚರಿಸಬೇಕೆಂದು ಆಗ್ರಹಿಸಿದ್ದಾರೆ.

ಮರಾಠ ಅಸ್ಮಿತೆಗೆ ಮತ್ತು ತನ್ನ ವಿವಾದಿತ ಹೇಳಿಕೆಗಳಿಗಾಗಿ ಖ್ಯಾತ ಠಾಕ್ರೆ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ರ್ಯಾಲಿಯಲ್ಲಿ ರಾಜ್ಯದ ನೀರಿನ ಸಮಸ್ಯೆ ಬಹಳ ಗಂಭೀರವಾಗಿದೆ. ಹೀಗಿರುವಾಗ ಹೋಳಿಹಬ್ಬಇರುವುದರಿಂದ ಜನರೊಂದಿಗೆ ಸೇರಿ ಸೂಖಿ ಹೋಳಿ ಆಚರಿಸಬೇಕೆಂದು ವಿನಂತಿಸಿದ್ದಾರೆ. ಒಂದುವೇಳೆ ಯಾರಾದರೂ ಹಾಗೆ ಮಾಡುವುದಿಲ್ಲವಾದರೆ ಅವರ ಕೈಗಳನ್ನು ಮುರಿಯಿರಿ. ಇದಲ್ಲದೆ ಗುಡಿಪಡ್ವಾ ಮತ್ತು ಶಿವಜಯಂತಿಯಂತಹ ಹಬ್ಬಗಳನ್ನುಯೋಜಿಸಲಾದಂತೆ ಆಚರಿಸಬೇಕೆಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News