×
Ad

ಕಾಸರಗೋಡು: ಕ್ರೈಸ್ತರಿಂದ ಗರಿಗಳ ಭಾನುವಾರ ಆಚರಣೆ

Update: 2016-03-20 12:41 IST

ಕಾಸರಗೋಡು, ಮಾ.20: ಗರಿಗಳ ಭಾನುವಾರ ಆಚರಣೆಯೊಂದಿಗೆ ಕ್ರೈಸ್ತ ರ ಪವಿತ್ರ ಸಪ್ತಾಹ  ಇಂದು ಆರಂಭಗೊಂಡಿದೆ. ಯೇಸುಕ್ರಿಸ್ತರು  ಜೆರುಸಲೆಂಗೆ ಪ್ರವೆಶಿಸಿಸುವ ಸಂದರ್ಭದಲ್ಲಿ ಭಕ್ತರು 'ಒಲಿವ್ ' ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಇಂದು ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ  ಪಾಲ್ಗೊಂಡರು .

ಮಂಗಳೂರು ಧರ್ಮಪ್ರಾಂತ್ಯ ಕ್ಕೆ ಒಳಪಟ್ಟ  ಕಾಸರಗೋಡು  ವಲಯದ ಎಲ್ಲಾ  ಚರ್ಚ್ ಹಾಗೂ ಜಿಲ್ಲೆಯ ಇತರ ಚರ್ಚ್ ಗಳಲ್ಲಿ  ಗರಿಗಳ ಭಾನುವಾರ  ವಿಶೇಷ ಪ್ರಾರ್ಥನೆ ಯೊಂದಿಗೆ  ನಡೆಯಿತು.

ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ  ನಡೆದ ಆಶೀರ್ವಚನ ವನ್ನು ವಂ. ವಿಕ್ಟರ್  ಡಿ ಸೋಜ ನೆರವೇರಿಸಿದರು.

ಬೇಳಾ,  ಕೊಲ್ಲಂಗಾನ, ಕಾಸರಗೋಡು , ಕುಂಬಳೆ , ನಾರಾಂಪಾಡಿ, ಉಕ್ಕಿನಡ್ಕ, ಮಣಿಯ೦ಪಾರೆ, ಮಂಜೇಶ್ವರ , ತಲಪಾಡಿ , ವರ್ಕಾಡಿ ,ಪಾವೂರು , ಮೀಯಪದವು  ಚರ್ಚ್ ಗಳಲ್ಲಿ ಗರಿಗಳ ಭಾನುವಾರ ವನ್ನು  ಆಚರಿಸಲಾಯಿತು.

ಯೇಸುಕ್ರಿಸ್ತರು  ಶಿಲುಬೆಯಲ್ಲಿ  ಮರಣಿಸಿದ ಅಥವಾ ಶುಭ ಶುಕ್ರವಾರದ ಪೂರ್ವ  ಭಾನುವಾರವನ್ನು  ಗರಿಗಳ ಭಾನುವಾರವಾಗಿ  ಕ್ರೈಸ್ತರುಆಚರಿಸುತ್ತಾರೆ.

ಪೂಜೆಗೆ ಮೊದಲು ತೆಂಗಿನ ಗರಿಗಳನ್ನು  ಚರ್ಚ್ ಆವರಣದಲ್ಲಿ  ಆಶೀರ್ವಚಿಸಿ  ಬಳಿಕ ಅವುಗಳನ್ನು ಹಿಡಿದು  ಮೆರವಣಿಗೆಯಲ್ಲಿ  ಸಾಗಿ ಚರ್ಚ್ ನೊಳಗೆ  ಪ್ರವೇಶಿಸಿದರು.

ಗುರುವಾರ  ಯೇಸುಕ್ರಿಸ್ತರ  ಕೊನೆಯ ಭೋಜನದ  ದಿನ, ಶುಕ್ರವಾರ ಯೇಸುಕ್ರಿಸ್ತರು ಶಿಲುಬೆಗೇರಿಸಿದ  ದಿನ,  ಶನಿವಾರ ರಾತ್ರಿ  ಜಾಗರಣೆ ಮತ್ತು   ಭಾನುವಾರ ಯೇಸುಕ್ರಿಸ್ತರ  ಪುನಾರುತ್ಥಾನದ ಹಬ್ಬ ವನ್ನು  ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News