70 ಕೆಜಿ ತೂಕ ಇಳಿಸಿಕೊಂಡರು ಜೂನಿಯರ್ ಅಂಬಾನಿ !
ಮುಂಬೈ , ಮಾ. 20 : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ , ದೇಶದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಸುಮಾರು 70 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡು ಸ್ಲಿಮ್ ಎಂಡ್ ಟ್ರಿಮ್ ಆಗಿ ಗಮನ ಸೆಳೆಯುತ್ತಿದ್ದಾರೆ.
ಶನಿವಾರ ತಮ್ಮ ಹೊಸ ಅವತಾರದಲ್ಲಿ ಸೋಮನಾಥ ದೇವಾಲಯಕ್ಕೆ ಬಂದಿದ್ದ ಅನಂತ್ ರನ್ನು ನೋಡಿದವರಿಗೆ ಆಶ್ಚರ್ಯ. ಈಗ ಮೊದಲಿನ ತೂಕದ ಹೆಚ್ಚೂ ಕಡಿಮೆ ಅರ್ಧಕ್ಕರ್ಧ ಕಡಿಮೆಯಾಗಿದ್ದಾರೆ ಜೂನಿಯರ್ ಅಂಬಾನಿ.
ಅಮೇರಿಕಾದ ವಿಶೇಷ ತರಬೇತುದಾರರ ಮಾರ್ಗದರ್ಶನದಲ್ಲಿ ಕಳೆದ ಕೆಲವು ತಿಂಗಳಿಂದ ಮಾಡಿದ ಪರಿಶ್ರಮ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ವರ್ಕ್ ಔಟ್ ಮಾತ್ರವಲ್ಲದೆ ತಮ್ಮ ಜಾಮ್ನಗರ್ ಘಟಕದಲ್ಲಿ ಮ್ಯಾರಥಾನ್ ನಲ್ಲೂ ಸಾಕಷ್ಟು ಭಾಗವಹಿಸಿದ್ದರು ಅನಂತ್.
ಅನಂತ್ ಗೆ ಇನ್ನೊಬ್ಬ ಸೋದರ ಆಕಾಶ್ ಹಾಗು ಸೋದರಿ ಇಶಾ ಇದ್ದಾರೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ ತಂಡ ಆಡುವಾಗಲೆಲ್ಲಾ ಗಣ್ಯರ ಗ್ಯಾಲರಿಯಲ್ಲಿ ಕಾಣ ಸಿಗುತ್ತಿದ್ದ ಅನಂತ್ ತಮ್ಮ ಬೃಹತ್ ಗಾತ್ರದಿಂದ ಗಮನ ಸೆಳೆಯುತ್ತಿದ್ದರು.