×
Ad

ಪೆನ್ನ್ ಗಾತ್ರದ ಶಿಶು ಬದುಕಿ ಉಳಿದದ್ದೇ ಸಹೋದರಿ, ತಂದೆ, ತಾಯಿಯರ ಅದಮ್ಯ ಪ್ರೀತಿಯಲ್ಲಿ

Update: 2016-03-20 13:47 IST

ಅಡಿಲೈಡ್, ಮಾರ್ಚ್.20; 2010 ಜೂನ್‌ನಲ್ಲಿ ಅಡಿಲೈಡ್‌ನ ಆಸ್ಪತ್ರೆಯೊಂದರಲ್ಲಿ ಹುಟ್ಟಿದ್ದ ಲಿಲ್ಲಿ ಕೋವಿಂಗ್ ಎಂ ಶಿಶುವಿನ ಗಾತ್ರ ಒಂದು ಪೆನ್ನ್‌ನಷ್ಟಿತ್ತು. ಕೇವಲ 390 ಗ್ರಾಂ ತೂಕವಿದ್ದ ಈ ಶಿಶುವಿನ ಅವಯವಗಳು ಒಂದು ಪ್ಪಾಸ್ಟಿಕ್ ಕವರ್‌ನಲ್ಲಿ ಹಾಕಿಡಬಹುದೆಂಬಂತೆ ಹೊರಗೆ ಕಾಣಿಸುತ್ತಿತ್ತು. ಈಶಿಶುವನ್ನು ನೋಡಿದ್ದವರಲ್ಲಿ ಹೆಚ್ಚಿನವರು ಇದು ಬದುಕುಳಿಯಲಾರದೆಂದೇ ಬಗೆದಿದ್ದರು. ಆದರೆ ತನ್ನ ಅವಳಿ ಸಹೋದರಿ ಸಮ್ಮರ್ ಕೋವಿಂಗ್‌ಳ ಅದಮ್ಯ ಪ್ರೀತಿಯಿಂದ ಎಲ್ಲ ಪ್ರತಿಕೂಲ ಪರಿಸ್ಥಿತಿಯನ್ನು ಮೀರಿ ಬೆಳೆಯುವಲ್ಲಿ ಲಿಲ್ಲಿ ಯಶಸ್ವಿಯಾಗಿದ್ದಾಳೆ. ಪ್ರೀತಿಗಿಂತ ದೊಡ್ಡ ಮದ್ದಿಲ್ಲವೆಂಬುದನ್ನು ಸಾಬೀತು ಪಡಿಸುವಂತೆ ಈ ಮಗು ಅದ್ಭುತವಾಗಿ ಬೆಳೆಯುತ್ತಿತ್ತು. ಹುಟ್ಟುವಾಗಲೇ ಪ್ರತಿಕೂಲ ಪರಿಸ್ಥಿತಿಯನ್ನು ದಾಟಿದ ಈಗ ಐದುವರ್ಷ ಪ್ರಾಯ ಪೂರ್ತಿಯಾದ ಲಿಲ್ಲಿ ಶಾಲೆಗೆ ಹೋಗಲು ಆರಂಭಿಸಿದ್ದಾಳೆ. ಸಂಪೂರ್ಣ ಬೆಳವಣಿಗೆಯಾಗುವುದಕ್ಕಿಂತ ಮೂರು ತಿಂಗಳ ಮೊದಲೇ ಈ ಅವಳಿ ಸಹೋದರಿಯರು ಹುಟ್ಟಿದ್ದರು. ಆದರೆ ಲಿಲ್ಲಿಗಿಂತ ಸಮ್ಮರ್ ದುಪ್ಪಟು ತೂಕ ಹೊಂದಿದ್ದಳು. ಸಮ್ಮರ್‌ಳಿಗೆ ಹುಟ್ಟುವ ವೇಳೆ 840 ಗ್ರಾಂ ತೂಕವಿತ್ತು. ಈಗ ಲಿಲ್ಲಿ ಮನೆಯ ಹೊರಗಡೆ ಹೋಗಿ ಆಡುತ್ತಿದ್ದಾಳೆಂದು ಅವಳಿ ಮಕ್ಕಳ ತಾಯಿ ರಾಬರ್ಟ್ಸ್ ಕೋವಿಂಗ್ ಹೇಳುತ್ತಾರೆ. ಒಣಗಿದಂತೆ ಲಿಲ್ಲಿಯ ಕಿವಿಗಳು ಹುಟ್ಟುವಾಗ ಇದ್ದವು. ಕಣ್ಣುಗಳನ್ನು ಕೆಲವು ವಾರಗಳವರೆ ಅವಳು ತೆರೆದಿರಲಿಲ್ಲ. ಗರ್ಭದಲ್ಲಿ ಲಿಲ್ಲಿಯ ಸ್ಥಿತಿ ಸುರಕ್ಷಿತವಲ್ಲ ಎಂದು ವೈದ್ಯರಿಗೆ ಗೊತ್ತಾದಾಗ ಮೂರು ತಿಂಗಳಿಗೆ ಮೊದಲೇ ಸಿಸರೇನಿಯನ್ ಮೂಲಕ ಅವಳಿ ಶಿಶುಗಳನ್ನು ಅವರು ಹೆರಿಗೆ ಮಾಡಿಸಿದ್ದರು. ಯಾಕೆಂದರೆ ಲಿಲ್ಲಿ ಗರ್ಭದಲ್ಲಿಯೇ ಮೃತಳಾದರೆ ಸಮ್ಮರ್‌ಳಿಗೆ ಹಾನಿಯಾಗುತ್ತಿತ್ತು. ಆದ್ದರಿಂದ ಮುಂಚಿತವಾಗಿ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಿದ್ದರು.

ಹುಟ್ಟಿದ ಕೂಡಲೇ ಎರಡು ಮಕ್ಕಳು ಉಸಿರಾಡುತ್ತಿದ್ದರೂ ಅವರಿಬ್ಬರನ್ನೂ ವೆಂಟಿಲೇಟರ್‌ನಲ್ಲಿಡಲಾಗಿತ್ತು. ಆನಂತರ ಆಸ್ಪತ್ರೆಯ ಇನ್ಟೆಸಿವ್ ಕೇರ್ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ನಾಲ್ಕು ವಾರದ ಬಳಿಕ ಲಿಲ್ಲಿಯ ಆರೋಗ್ಯ ಸ್ಥಿತಿ ಗಂಭೀರವಾಗಿ ಬಿಗಡಾಯಿಸಲು ಆರಂಭವಾಗಿತ್ತು. ಆನಂತರ ಅವಳ ಮರಣವನ್ನು ಎದುರಿಸಲು ತಂದೆ ತಾಯಿ ಮನಸ್ಸು ಗಟ್ಟಿ ಮಾಡತೊಡಗಿದರು. ಆನಂತರ ಲಿಲ್ಲಿಯನ್ನು ಸಮ್ಮರ್‌ಳ ಬಳಿಗೆ ವರ್ಗಾಯಿಸಿದರು. ಗರ್ಭಪಾತ್ರದಂತೆ ಅವರಿಬ್ಬರ ನಿಕಟತೆ ವರ್ಧಿಸಲು ಸಹಾಯಕವಾಗಬಹುದೆಂದು ತಂದೆ ತಾಯಿಯ ವಿಶ್ವಾಸವಾಗಿತ್ತು. ಆನಂತರ ಅವರಿಬ್ಬರು ಅಂಟಿಕೊಂಡಂತೆ ಮಲಗತೊಡಗಿದರು. ಕೆಲವು ಸಮಯ ಲಿಲ್ಲಿಯ ಆರೋಗ್ಯದಲ್ಲಿ ಏರಿಳಿತಗಳಾಗುತ್ತಿತ್ತು. ಮೂರು ತಿಂಗಳ ಬಳಿಕ ಸಮ್ಮರ್ ಮತ್ತು ಎಂಟು ತಿಂಗಳ ಬಳಿಕ ಲಿಲ್ಲಿಯನ್ನೂ ಮನೆಗೆ ಕರೆದುಕೊಂಡು ಹೋಗಲಾಯಿತು. ಲಲ್ಲಿಯ ಹೃದಯ ಮತ್ತು ಶ್ವಾಸಕೋಶದಲ್ಲಿ ತೊಂದರೆ ಇತ್ತು. ಇದಲ್ಲದೆ ವೈರಸ್ ಬಾಧೆ ಆಗಿತ್ತು. ಮನೆಗೆ ಹೋದ ಮೇಲೆಯೂ ಲಿಲ್ಲಿಗೆ ಎರಡು ವರ್ಷಗಳವರೆಗೆ ಆಕ್ಸಿಜನ್‌ನ್ನು ನೀಡಲಾಗುತ್ತಿತ್ತು. ಆನಂತರ ಸಹೋದರಿ ಮತ್ತು ತಂದೆ ತಾಯಿಯರ ಕಳಂಕರಹಿತ ಪ್ರೀತಿಯ ನೆರಳಲ್ಲಿ ಲಿಲ್ಲಿ ಜೀವನದೆಡೆಗೆ ಸಾಗಿಬಂದಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News