ಮಂಗಳೂರು: ಗರಿಗಳ ಭಾನುವಾರ ಆಚರಣೆ
Update: 2016-03-20 15:12 IST
ಮಂಗಳೂರು, ಮಾ.20: ಗರಿಗಳ ಭಾನುವಾರ ಆಚರಣೆಯೊಂದಿಗೆ ಕ್ರೈಸ್ತ ರ ಪವಿತ್ರ ಸಪ್ತಾಹ ಇಂದು ಆರಂಭಗೊಂಡಿದೆ. ಯೇಸುಕ್ರಿಸ್ತರು ಜೆರುಸಲೆಂಗೆ ಪ್ರವೆಶಿಸಿಸುವ ಸಂದರ್ಭದಲ್ಲಿ ಭಕ್ತರು 'ಒಲಿವ್ ' ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಇಂದು ಮಂಗಳೂರಿನಲ್ಲಿ ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು .